Breaking News

ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಕೊಡಬೇಕು: ಶ್ರೀಮಂತ ಪಾಟೀಲ

Spread the love

ಬೆಳಗಾವಿ: ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಕೊಡಬೇಕು. ಈ ಬಗ್ಗೆ ನಾನು ಸಹ ಸಿಎಂಗೆ ಒತ್ತಾಯ ಮಾಡುತ್ತೇನೆ ಎಂದು ಸಚಿವ ಶ್ರೀಮಂತ್ ಪಾಟೀಲ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,

ರಮೇಶ್ ಜಾರಕಿಹೊಳಿ‌ ಹೇಳಿದಂತೆ ಸಿಡಿ ಪ್ರಕರಣದ ಬಗ್ಗೆ ಆದಷ್ಟು ಬೇಗ ಉನ್ನತ ಮಟ್ಟದ ತನಿಖೆಯಾಗಬೇಕು. ರಮೇಶ್​ ಒಳ್ಳೆಯ ಮನುಷ್ಯ. ನನ್ನ ಅಭಿಪ್ರಾಯದಂತೆ ಅವರಿಗೆ ಕ್ಲೀನ್ ಚಿಟ್​ ಸಿಗಬಹುದು. ಹೀಗಾಗಿ, ಸಮಗ್ರ ತನಿಖೆ ಆಗಬೇಕು. ಪ್ರಕರಣದಲ್ಲಿ ಯಾರಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ ಎಂದರು.

ಕಳೆದ ಹಲವು ವರ್ಷಗಳಿಂದ ಉತ್ತರ ಭಾಗದ ನೀರಾವರಿ ಯೋಜನೆಗಳು ಸಾಕಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹೀಗಾಗಿ, ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಅವರಿಗೆ ಕೊಡಬೇಕು. ಇದರಿಂದ ಈ ಭಾಗದ ಸಾಕಷ್ಟು ಯೋಜನೆಗಳನ್ನು ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ