Breaking News

ಹಳ್ಳಿಹಕ್ಕಿ ಅವರದ್ದು ಸಿಡಿ ಇದ್ಯಾಂತ? ಕುಟುಕಿದ ಕುಮಾರಸ್ವಾಮಿ

Spread the love

ಮೈಸೂರು (ಮಾ. 11): ರಮೇಶ್ ಜಾರಕಿಹೊಳಿ ಸಿಡಿ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಸಿಡಿ ವಿಚಾರವಾಗಿ ರಾಜಕೀಯ ನಾಯಕರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೇ ವೇಳೆ ಸಿಡಿ ವಿಚಾರವಾಗಿ ಎಂಎಲ್​ಸಿ ವಿಶ್ವನಾಥ್​ ವಿರುದ್ಧ ವ್ಯಂಗ್ಯವಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಏನು ಅವರದ್ದು ಸಿಡಿ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಯಾರ್ಯಾರ ಸಿಡಿ ಇದೇಯೋ ಇಲ್ವೋ ನನಗೇನು ಗೊತ್ತು, ಆ ಯತ್ನಾಳ್ ಹೇಳುತ್ತಾರೆ ಇನ್ನು 26 ಜನರ ಸಿಡಿ ಇದೆ ಅಂತ, ಸಿಡಿ ಪ್ರಕರಣದಲ್ಲಿ ರಾಜ್ಯದಲ್ಲಿ ಇನ್ನು ಏನೇನು ನೋಡಬೇಕೋ ನಾವು ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಆರು ಸಚಿವ ಮಹಾನುಭಾವರು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ನೋಡಿ ನಮಗೆ ಆಶ್ಚರ್ಯವಾಯಿತು. ಸಚಿವರಾದವರು ಕೊರ್ಟ್‌ನಲ್ಲಿ ನಮ್ಮ ತೇಜೋವಧೆ ಮಾಡುವಂತಹ ಅಪಪ್ರಚಾರಗಳಿಗೆ ಅವಕಾಶ ಕೊಡಬೇಡಿ ಎಂದು ಕೇಳಿಕೊಳ್ಳಬಹುದಿತ್ತು, ಆದರೆ, ನಮಗೆ ಸಂಬಂಧಪಟ್ಟ ಸಿಡಿ ವಿಚಾರ ಪ್ರಸಾರ ಮಾಡಬಾರದು ಎಂದು ಕೋರಿದ್ದಾರೆ. ಈ ವಿಚಾರವನ್ನು ವಕೀಲರಿಂದ ಕೇಳಿ ಆಶ್ವರ್ಯವಾಯ್ತು. ಹಾಗಾದ್ರೆ ಇವರ ಸಿಡಿ ಇದೆ ಅಂತ ಆಯ್ತು ಅಲ್ಲವೇ?. ಆರು ಸಚಿವರು ತಮಗೆ ರಕ್ಷಣೆ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ, .ಸಚಿವರಾಗಿದ್ದುಕೊಂಡು ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಲಾರದವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ ಎಂದು ಪ್ರಶ್ನಿಸಿದರು

ಸಿಡಿ ರಾಜಕಾರಣ ಮಾಡಬೇಡಿ ಇಂತಹ ಅದೇಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬಕ್ಕೆ ಬಂದಿವೆ. ಇಂತಹ ಪ್ರಕರಣ ತಂದವರಿಗೆ ಬುದ್ದಿ ಹೇಳಿ ಕಳುಹಿಸಿದ್ದೇವೆ.‌ ನಾವು ನೇರವಾಗಿ ಯದ್ದ ಮಾಡಬೇಕು. ಇಂತಹ ಪ್ರಕರಣಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಅದರಿಂದ ಜನರಿಗೆ ಏನು ಸಂದೇಶ ಕೊಡಲು ಸಾಧ್ಯ? ರಮೇಶ್‌ ಜಾರಕಿಹೊಳಿಯವರಿಗೆ ಈಗ ಮನವರಿಕೆ ಆಗಿರಬಹುದು ಕುಮಾರಸ್ವಾಮಿ ಇದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ಅಂತ ರಿಯಲೈಸ್ ಆಗಿರಬೇಕು ಎಂದು ಹೇಳಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ