Breaking News

ಮಂಜು ಎಲ್ಲೆಲ್ಲೋ ಮುಟ್ಟುತ್ತಾರೆ : ನಿಧಿ….?

Spread the love

ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲ ಆಗುತ್ತದೆ, ಯಾರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಊಹೀಸೋದು ತುಂಬಾನೇ ಕಷ್ಟ. ಈಗ ಕನ್ನಡ ಬಿಗ್​ ಬಾಸ್​ ಮನೆಯಲ್ಲೂ ಅದೇ ರೀತಿ ಆಗುತ್ತಿದೆ. ಎಲ್ಲಾ ಸದಸ್ಯರು ತಮ್ಮ ಅಸಲಿ ಮುಖವನ್ನು ಅನಾವರಣ ಮಾಡುತ್ತಿದೆ. ಅದೇ ಮನೆ ಒಳಗೆ ತೆರಳಿರುವ ಪ್ರಶಾಂತ್​ ಸಂಭರಗಿ ಡಬಲ್​ ಗೇಮ್​ ಆಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ನಿನ್ನೆ ನಡೆದ ಘಟನೆ ಹೊಸ ಉದಾಹರಣೆ.

ಮಂಜು ಮತ್ತು ಶಮಂತ್​ ಉದ್ದೇಶಪೂರ್ವಕವಾಗಿ ಪರಚುತ್ತಿದ್ದಾರೆ. ಬೇಕೆಂತಲೇ ಅವರು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ. ನಮ್ಮ ತಂಡದವರು ಯಾರೊಬ್ಬರೂ ಹುಡುಗಿಯನ್ನು ಮುಟ್ಟಿಲ್ಲ. ಆದರೆ, ಅವರು ತಂಡದವರು ಹಾಗಲ್ಲ. ಪ್ಲ್ಯಾನ್​ ಮಾಡಿ ಅವರು ಬಂದು ನಮ್ಮನ್ನು ಹಿಡಿದುಕೊಳ್ಳುತ್ತಿದ್ದಾರೆ. ತುಂಬಾನೇ ರಫ್​ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಮಂಜು ಬಂದು ನನ್ನನ್ನು ಎಲ್ಲೆಲ್ಲೋ ಮುಟ್ಟಿ ಎಸೆದಿದ್ದಾರೆ. ನಮಗೆ ಹೇಸಿಗೆ ಎನಿಸುತ್ತಿದೆ. ಈ ಆಟ ಸಾಕು ಇಲ್ಲಿಗೆ ನಿಲ್ಲಿಸಿ ಎಂದು ನಿಧಿ ಕಣ್ಣೀರು ಹಾಕಿದ್ದರು. ಇದನ್ನು ಕೇಳಿ ಪ್ರಶಾಂತ್​ ಸಂಬರಗಿ ನೊಂದುಕೊಂಡರು.

ಆದರೆ, ರಾತ್ರಿ ವೇಳೆಗೆ ಪ್ರಶಾಂತ್​ ಉಲ್ಟಾ ಹೊಡೆದುಬಿಟ್ಟರು. ನಿಧಿ ಆಟವನ್ನು ಹಗುರವಾಗಿ ಪರಿಗಣಿಸಿದರು ಎನ್ನುವ ಆರೋಪ ಮಾಡಿದರು. ನಂತರ ಮಂಜು ಬಳಿ ಹೋದ ಪ್ರಶಾಂತ್, ನಿಧಿ ಅಸಹ್ಯ ಮಾಡಿ ಬಿಟ್ಟರು. ನಮ್ಮ ಟೀಂನಲ್ಲಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಬಿಟ್ಟುಕೊಡೋಕೆ ಆಗಿಲ್ಲ ಎಂದಿದ್ದಾರೆ.

ಬಿಗ್​ ಬಾಸ್​ ಟಾಸ್ಕ್​ ರದ್ದು!

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಒಂದಷ್ಟು ಸದಸ್ಯರು ವೈರಸ್​ ಆದರೆ, ಉಳಿದ ಸದಸ್ಯರು ಮನುಷ್ಯರು. ಆದರೆ, ಈ ಗೇಮ್​ನಲ್ಲಿ ಕ್ರೀಡಾಸ್ಫೂರ್ತಿಯನ್ನು ಯಾರೂ ಮೆರೆದಿಲ್ಲ ಎನ್ನುವ ಕಾರಣಕ್ಕೆ ಬಿಗ್​ ಬಾಸ್​ ಆಟವನ್ನೇ ರದ್ದು ಮಾಡಿ ಛೀಮಾರಿ ಹಾಕಿದೆ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ