Breaking News

50 ಕೋಟಿ ರೂ.ಗೂ ಹೆಚ್ಚು ವಹಿವಾಟು ಹೊಂದಿರುವ ಉದ್ಯಮಗಳಿಗೆ ಏಪ್ರಿಲ್ 1ರಿಂದ ಇ-ಇನ್ ವಾಯ್ಸ್ ಕಡ್ಡಾಯ

Spread the love

ನವದೆಹಲಿ : 50 ಕೋಟಿ ರೂ.ಗೂ ಹೆಚ್ಚು ವಹಿವಾಟು ಹೊಂದಿರುವ ಉದ್ಯಮಗಳಿಗೆ ಏಪ್ರಿಲ್ 1ರಿಂದ ಬಿ2ಬಿ ವಹಿವಾಟಿಗೆ ಇ-ಇನ್ ವಾಯ್ಸ್ ಗಳನ್ನು ತಯಾರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಕಾನೂನಿನ ಪ್ರಕಾರ, 2020ರ ಅಕ್ಟೋಬರ್ 1ರಿಂದ 2021ರ ವರೆಗೆ 500 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಕಂಪನಿಗಳಿಗೆ ವ್ಯಾಪಾರ-ವಹಿವಾಟಿಗೆ (ಬಿ2ಬಿ) ಇ-ಇನ್ ವಾಯ್ಸಿಂಗ್ ಕಡ್ಡಾಯಗೊಳಿಸಲಾಗಿದೆ.

ಏಪ್ರಿಲ್ 1ರಿಂದ 50 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಕಂಪನಿಗಳಿಗೆ ಇ-ಇನ್ ವಾಯ್ಸಿಂಗ್ ವಿಸ್ತರಿಸಲಾಗುವುದು ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ (ಸಿಬಿಐಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಇ-ಇನ್ ವಾಯ್ಸಿಂಗ್ ಅಡಿಯಲ್ಲಿ, ತೆರಿಗೆದಾರರು ತಮ್ಮ ಆಂತರಿಕ ವ್ಯವಸ್ಥೆಗಳಲ್ಲಿ (ERP/ಅಕೌಂಟಿಂಗ್/ಬಿಲ್ಲಿಂಗ್ ಸಾಫ್ಟ್ ವೇರ್) ಇನ್ ವಾಯ್ಸ್ ಗಳನ್ನು ಜನರೇಟ್ ಮಾಡಬೇಕು ಮತ್ತು ನಂತರ ಇನ್ ವಾಯ್ಸ್ ರಿಜಿಸ್ಟ್ರೇಶನ್ ಪೋರ್ಟಲ್ (IRP)ಗೆ ವರದಿ ಮಾಡಬೇಕು.

IRP ಯು ಇನ್ ವಾಯ್ಸ್ ಗಳಲ್ಲಿ ಒದಗಿಸಲಾದ ಮಾಹಿತಿಯನ್ನು ಮಾನ್ಯ ಮಾಡುತ್ತದೆ ಮತ್ತು ಡಿಜಿಟಲ್ ಸಹಿ ಮಾಡಿದ ಇ-ಇನ್ ವಾಯ್ಸ್ ಗಳನ್ನು ಒಂದು ವಿಶಿಷ್ಟ ‘ಇನ್ ವಾಯ್ಸ್ ರೆಫರೆನ್ಸ್ ನಂಬರ್ (IRN)’ ಜೊತೆಗೆ ಕ್ಯೂಆರ್ ಕೋಡ್ ನೊಂದಿಗೆ ತೆರಿಗೆದಾರರಿಗೆ ಹಿಂದಿರುಗಿಸಲಿದೆ.

ಏಪ್ರಿಲ್ 1ರಿಂದ 50 ಕೋಟಿ ರೂ.ಗಳ ವಹಿವಾಟು ನಡೆಸುವ ಉದ್ದಿಮೆಗಳಿಗೆ ಇ-ಇನ್ ವಾಯ್ಸಿಂಗ್ ಕಡ್ಡಾಯಗೊಳಿಸಲಾಗಿದೆ ಎಂದು ಇವೈ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ತಿಳಿಸಿದ್ದಾರೆ.

‘ಸೀಮಿತ ಸಮಯವು ಬಾಕಿಯಿರುವುದರಿಂದ, ಈ ವಿಭಾಗದ ಉದ್ಯಮಗಳು ಮಾಹಿತಿ ತಂತ್ರಜ್ಞಾನವನ್ನು ಪೂರ್ವಭಾವಿಯಾಗಿ ನಕ್ಷೆ ಮಾಡಿ, ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಿ ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಬೇಕು’ ಎಂದು ಜೈನ್ ಹೇಳಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ