ಬೆಂಗಳೂರು: ಕಲಾಪ ಸಲಹಾ ಸಮಿತಿ ಸಭೆಯನ್ನು ಕಾಂಗ್ರೆಸ್ ಪಾರ್ಟಿ ಸಭೆಗೆ ಬಹಿಷ್ಕರಿಸಿದೆ. ಬಜೆಟ್ ಕಲಾಪವನ್ನೂ ಬಹಿಷ್ಕರಿಸಿತ್ತು. ಇಂತಹ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೈತಿಕ ಸರ್ಕಾರವಾಗಿದ್ದರೆ ನೀವು ಸದನದಲ್ಲಿ ಚರ್ಚಿಸಿ. ಬಹಿಷ್ಕರಸಿ ಏನು ಪ್ರಯೋಜನ? ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ಸಭಾತ್ಯಾಗ ಎಂದು ಮಾಡಬಾರದುಅವರೇ ಹೇಳುತ್ತಿದ್ದರು. ಸದನದೊಳಗೆ ಏನೇ ಇದ್ದರೂ ಚರ್ಚೆ ಮಾಡಿ ಎನ್ನುತ್ತಿದ್ದರು. ಈಗ ಅವರೇ ಈ ರೀತಿ ತಪ್ಪಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.
ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ಷಡ್ಯಂತ್ರ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಇದರ ಬಗ್ಗೆ ಸಮಗ್ರ ತನಿಖೆಯಾಗಲಿ. ಯಾವುದೇ ಷಡ್ಯಂತ್ರವಿದ್ದರೂ ಹೊರಬರಲಿದೆ ಎಂದರು.
ಸಂತ್ರಸ್ಥೆಯೇ ದೂರು ಕೊಡಬೇಕಿತ್ತು. ಇಲ್ಲಿ ಸಂತ್ರಸ್ಥೆ ದೂರು ಕೊಟ್ಟಿಲ್ಲ. ರಮೇಶ್ ಹೇಳಿದಂತೆ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ತನಿಖೆಯಾದರೆ ಷಡ್ಯಂತ್ರ ಇದ್ದರೆ ಬಯಲಾಗಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
 Laxmi News 24×7
Laxmi News 24×7
				 
		 
						
					 
						
					 
						
					