Breaking News

ಜೆಡಿಎಸ್ ಸೇರುವುದಾಗಿ ಹೇಳಿಯೇ ಇಲ್ಲ: ಸಿ.ಎಂ. ಇಬ್ರಾಹಿಂ ಯು ಟರ್ನ್!

Spread the love

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡರಾದ ಸಿ.ಎಂ. ಇಬ್ರಾಹಿಂ ಅವರು ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ ನಾನು ಜೆಡಿಎಸ್ ಸೇರುವುದಾಗಿ ಹೇಳಿಲ್ಲ ಎಂದು ಯು ಟರ್ನ್ ಹೊಡೆದಿದ್ದಾರೆ.

“ಕುಮಾರಸ್ವಾಮಿ, ದೇವೆಗೌಡರ ಜೊತೆ ಚೆನ್ನಾಗಿದ್ದೇನೆ ಅದೆ ರೀತಿ ಬಿಜೆಪಿ ಪಕ್ಷದ ನಾಯಕರು ನನ್ನ ಸಹ ಜೊತೆ ಚೆನ್ನಾಗಿದ್ದಾರೆ” ಎಂದು ಹೇಳಿದರು. ಜೆಡಿಎಸ್ ಸೇರುವ ಸುದ್ದಿಯ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ರಾಜಕೀಯವಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

“ಇಂದು ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ. ಜೆಡಿಎಸ್ ಸೇರುವ ಬಗ್ಗೆ ದೆಹಲಿಯಲ್ಲಿ ತೀರ್ಮಾನವಾಗಲಿದೆ ಸಿಕ್ಕಾಗ ದೆಹಲಿಗೆ ಹೋಗಿ ಬರುತ್ತೇನೆ ಎಂದರು. ರಾಜ್ಯ,ರಾಷ್ಟ್ರ ರಾಜಕಾರಣದ ಚರ್ಚೆ ಮಾಡಲಾಗಿದೆ ಪಕ್ಷದಲ್ಲಿ ನನ್ನ ಪಾತ್ರ ಏನು ಎಂಬುದನ್ನು ಚರ್ಚೆ ಮಾಡಿದ್ದೇವೆ, ರಾಜ್ಯದಲ್ಲಿ ನಮ್ಮ ಸಮುದಾಯ 18 ಇದೆ ಹೀಗಾಗಿ ನನ್ನ ಪಾತ್ರ ಕೂಡ ದೊಡ್ಡದಿದೆ. 1 ರೂ. ಖರ್ಚು ಮಾಡಿ 50 ಪೈಸೆ ಲಾಭ ಕೇಳಿದ್ದೇನೆ. ಕೆಲವರು ಖರ್ಚು ಮಾಡದೆ ಎರಡು ರೂಪಾಯಿ ಲಾಭ ಮಾಡುತ್ತಿದ್ದಾರೆ. ಆದ್ದರಿಂದ ನನ್ನ ಕೂಲಿ ಕೇಳ್ತಿದ್ದೇನೆ ಹೈಕಮಾಂಡ್ ಜೊತೆ ಕೂಡ ಚರ್ಚೆ ಮಾಡುತ್ತೇನೆ ಇದರ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಭೇಟಿಗೆ ಸಮಯ ಕೇಳಿದ್ದೇನೆ ಎಂದು ಹೇಳಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ