Breaking News

ಶೀ‍ಘ್ರದಲ್ಲೇ ಕಡಿಮೆ ದರದ ‘ಜಿಯೋ’ ಲ್ಯಾಪ್ ಟಾಪ್ ಮಾರುಕಟ್ಟೆಗೆ ಲಗ್ಗೆ..!

Spread the love

ಟೆಲಿಕಾಂ ಮಾರುಕಟ್ಟೆಯಲ್ಲಿ ಪಾರುಪತ್ಯೆ ಮೆರೆದಿರುವ ರಿಲಯನ್ಸ್ ಜಿಯೋ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಕೋಟ್ಯಂತರ ಭಾರತೀಯರಿಗೆ ಕಡಿಮೆ ದರದ ಲ್ಯಾಪ್‍ಟಾಪ್ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

2018ರಲ್ಲಿಯೇ ‘ಜಿಯೋ ಬುಕ್’ ಹೆಸರಿನ ಲ್ಯಾಪ್‍ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಅತೀ ಕಡಿಮೆ ದರದ ಲಾಪ್ ಟಾಪ್ ಜನರ ಕೈ ಸೇರುವ ಕಾಲ ಸನ್ನಿಹಿತವಾಗಿದೆ.

ಸಿಮ್ ಕಾರ್ಡ್ ಸಪೋರ್ಟ್ :

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲ್ಯಾಪ್ ಟಾಪ್ ಗಳಿಗಿಂತ ಜಿಯೋ ಬುಕ್ ಭಿನ್ನವಾಗಿರಲಿದೆ. ಮೊಬೈಲ್ ನಂತೆಯೇ ಸಿಮ್ ಕಾರ್ಡ್‍ ಸಪೋರ್ಟ್ ‘ಜಿಯೋಬುಕ್’ ಹೊಂದಿರಲಿದೆ. ಅದರಲ್ಲೂ ವಿಶೇಷವಾಗಿ 4G ವೋಲ್ಟ್ ಹಾಗೂ ಎಲ್‍ಟಿಇ ಫೀಚರ್ ಇರುವುದರಿಂದ ಮೊಬೈಲ್ ನಂತೆಯೇ ಹೈಸ್ಪೀಟ್ ನೆಟವರ್ಕ್‍ ಸೌಲಭ್ಯ ಪಡೆಯಬಹುದು.

ಜಿಯೋ ಒಎಸ್ :

‘ಜಿಯೋಬುಕ್’ ತನ್ನದೆಯಾದ ಆಪರೇಟಿಂಗ್ ಸಿಸ್ಟಂ ಹೊಂದಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಲ್ಯಾಪ್‍ಟಾಪ್ಗಳು ವಿಂಡೋಸ್ ಬಳಸುತ್ತವೆ. ಆದರೆ,ಇದರ ಬದಲಾಗಿ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಸಿದ್ಧಪಡಿಸಲಾಗಿದೆ. ಇದನ್ನು ಜಿಯೋ ಒಎಸ್ ಎಂದು ಕರೆಯಲಾಗಿದೆ.

ಚೀನಾ ಕಂಪನಿ ಜತೆ ಒಪ್ಪಂದ :

ಜಿಯೋಬುಕ್ ರಿಲಾಯನ್ಸ್ ಹಾಗೂ ಚೀನಾ ಮೂಲದ ಕಂಪನಿ ಬ್ಲೂಬ್ಯಾಂಕ್ ಸಹಭಾಗಿತ್ವದಡಿ ರೂಪಗೊಳ್ಳುತ್ತಿದೆ. ಬ್ಲೂಬ್ಯಾಂಕ್ ಪ್ರಸಿದ್ಧ ಮೊಬೈಲ್ ಹಾಗೂ ತಂತ್ರಾಂಶ ( ಸಾಫ್ಟ್ ವೇರ್ ) ತಯಾರಿಕಾ ಸಂಸ್ಥೆ. ಮೂರನೇ ವ್ಯಕ್ತಿಗಳಿಗೆ ಸಾಫ್ಟ್ ವೇರ್ ಸಿದ್ಧಪಡಿಸಿ ಮಾರಾಟ ಮಾಡುತ್ತದೆ. ಈ ಸಂಸ್ಥೆ ಜತೆಗೆ ರಿಲಾಯನ್ಸ್ ಒಪ್ಪಂದ ಮಾಡಿಕೊಂಡು ಜಿಯೋಬುಕ್ ವಿನ್ಯಾಸಗೊಳಿಸಿದೆ.

ಮಾರುಕಟ್ಟೆಗೆ ಯಾವಾಗ ?

‘ಜಿಯೋಬುಕ್’ ಮಾರುಕಟ್ಟೆಗೆ ಯಾವಾಗ ಲಗ್ಗೆ ಇಡುತ್ತದೆ ಎನ್ನುವುದರ ಕುರಿತು ಅಂತೆ-ಕಂತೆಗಳು ಹರಿದಾಡಿದ್ದವು. ಆದರೆ, ಇದೀಗ ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸುವ ದಿನಾಂಕ ನಿಗಧಿಯಾಗಿದೆ. ಈ ವರ್ಷದ (2021) ಮೊದಲಾರ್ಧದಲ್ಲಿ ಅಂದರೆ ಜೂನ್ ಇಲ್ಲವೆ ಜುಲೈನಲ್ಲಿ ಗ್ರಾಹಕರ ಕೈ ಸೇರಲಿದೆ ಜಿಯೋಬುಕ್ .


Spread the love

About Laxminews 24x7

Check Also

ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಂಚಿನಾಳ–ಹಳೇಗುಡಗನಟ್ಟಿ–ಯಮಕನಮರಡಿ ರಸ್ತೆಯ ಅಗಲೀಕರಣ, ಡಾಂಬರೀಕರಣ,

Spread the loveಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಂಚಿನಾಳ–ಹಳೇಗುಡಗನಟ್ಟಿ–ಯಮಕನಮರಡಿ ರಸ್ತೆಯ ಅಗಲೀಕರಣ, ಡಾಂಬರೀಕರಣ, ಪಾದಚಾರಿ ಮಾರ್ಗ (ಫುಟ್ ಪಾತ್) ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ