ಬೆಳಗಾವಿ: ವಾಹನ ಮೇಲಿಂದ ಬಿದ್ದು ಪೌರ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ಪಾಲಿಕೆ ಎದುರು ಪೌರ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಪೌರ ಕಾರ್ಮಿಕರ ಪ್ರತಿಭಟನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಂಬಲ ಸೂಚಿಸಿದರು. ಪಾಲಿಕೆ ಎದುರು ಧರಣಿ ಕುಳಿತು ಪರಿಹಾರಕ್ಕೆ ಆಗ್ರಹಿಸಿದರು.
ಜು. 19 ರಂದು ತ್ಯಾಜ್ಯ ವಿಲೇವಾರಿ ಮಾಡುವ ವೇಳೆ ವಾಹನ ಮೇಲಿಂದ ಬಿದ್ದ ಪೌರ ಕಾರ್ಮಿಕ ಪ್ರಾಣ ಕಳೆದುಕೊಂಡಿದ್ದರು. ತ್ಯಾಜ್ಯ ವಿಲೇವಾರಿ ವಾಹನಗಳು ದುರಸ್ತಿಯಲ್ಲಿವೆ. ಇನ್ಸುರೆನ್ಸ್ ಕೂಡ ಭರಿಸಿಲ್ಲ. ಅಲ್ಲದೇ ಬ್ಲಾಕ್ ಲಿಸ್ಟ್ ನಲ್ಲಿರುವ ಗುತ್ತಿಗೆದಾರನಿಗೆ ಪಾಲಿಕೆ ಮನೆ ಹಾಕಿದೆ. ಈ ದುರ್ಘಟನೆಗೆ ಗುತ್ತಿಗೆದಾರನ ನೇರ ಹೊಣೆ ಎಂಬ ಆಕ್ರೋಶ ವ್ಯಕ್ತವಾಯಿತು.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಪೌರ ಕಾರ್ಮಿಕರು ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ. ಪರ್ಮಿಷನ್ ಇಲ್ಲದ ಹಳೇ ವಾಹನಗಳನ್ನು ಪಾಲಿಕೆ ಇಟ್ಟುಕೊಂಡಿದೆ. ಲೈಸೆನ್ಸ್ ಇಲ್ಲದ ಚಾಲಕರಿಗೆ ವಾಹನ ನೀಡಿದ್ದಾರೆ. ಕಾನೂನು ಪಾಠ ಮಾಡುವ ಪಾಲಿಕೆ ಅಧಿಕಾರಿಗಳು ಕಾನೂನು ಬಗ್ಗೆ ಅರಿವಿಲ್ಲವಾ. ಪಾಲಿಕೆ ಬೇಜವಾಬ್ದಾರಿಯಿಂದ ಪೌರ ಕಾರ್ಮಿಕ ಜೀವ ಕಳೆದುಕೊಂಡಿದ್ದಾನೆ. ಸರ್ಕಾರ ಇದೆಯೋ ಸತ್ತಿದಿಯೋ ಎಂದು ಅರ್ಥವಾಗುತ್ತಿಲ್ಲ. ಆತನ ಕುಟುಂಬ ಬೀದಿಗೆ ಬಂದಿದೆ. ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.