Breaking News

ಹಾಲಿನ ಬೆಲೆ ಹೆಚ್ಚಳ ಪ್ರತಿ ಲೀಟರ್ ಗೆ 100 ರೂ. ನಿಗದಿ!

Spread the love

ಚಂಡೀಗಢ : ಕೃಷಿ ಕಾನೂನುಗಳನ್ನು ವಿರೋಸಿ ಹಾಗೂ ತೈಲ ಬೆಲೆ ಏರಿಕೆ ವಿರೋಸಿ ಇನ್ನು ಮುಂದೆ ಪ್ರತಿ ಲೀಟರ್ ಹಾಲನ್ನು 100 ರೂ . ಗೆ ಮಾರಾಟ ಮಾಡುವಂತೆ ಹರಿಯಾಣದ ಹಿಸ್ಸಾರ್ ‍ ಕಾಫ್ ಪಂಚಾಯ್ತಿ ರೈತರಿಗೆ ಸಲಹೆ ನೀಡಿದೆ . ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಸುಮಾರು 90 ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು ಹಂತ ಹಂತವಾಗಿ ತಮ್ಮ ಪ್ರತಿಭಟನೆಯನ್ನು ಹೆಚ್ಚಿಸುತ್ತಿದ್ದಾರೆ . ಸಹಕಾರ ಸಂಘಗಳ ಮೂಲಕ ಸರ್ಕಾರ ಖರೀದಿಸುವ ಹಾಲಿನ ಬೆಲೆಯನ್ನು ಲೀಟರ್ ‍ ಗೆ 100 ರೂ . ನಿಗದಿ ಮಾಡುವಂತೆ ರೈತರಿಗೆ ಕಾಫ್ ಸದಸ್ಯರು ಸಲಹೆ ನೀಡಿದ್ದಾರೆ .

ಇತ್ತೀಚೆಗೆ ಗುಜರಾತ್ ಹಾಲು ಮಾರುಕಟ್ಟೆ ಸಹಕಾರ ಸಂಘಗಳು ಪ್ರತಿ ಲೀಟರ್ ಹಾಲಿನ ದರದಲ್ಲಿ 2 ರೂ . ಹೆಚ್ಚಿಸಿದ್ದವು . ಅದರ ಬೆನ್ನಲ್ಲೇ ಈಗ ಹರಿಯಾಣ ರೈತರು ದರ ಏರಿಕೆಗೆ ಮುಂದಾಗಿರುವುದು ಜನ ಜೀವನವನ್ನು ಆತಂಕ್ಕೀಡು ಮಾಡಿದೆ . ಪ್ರಸ್ತುತ ಹರಿಯಾಣದಲ್ಲಿ ಪ್ರತಿ ಲೀಟರ್ ಹಾಲಿನ ದರ 55 ರಿಂದ 60 ರೂ . ಇದ್ದು , ಅದನ್ನು ಏಕಾಕಿ ಹೆಚ್ಚಳ ಮಾಡಲು ಕಾಫ್ ಪಂಚಾಯ್ತಿ ನಿರ್ಧರಿಸಿದೆ . ಸರ್ಕಾರದ ಸಹಕಾರ ಸಂಘಗಳಿಗೆ ಮಾರಾಟ ಮಾಡುವ ಹಾಲಿನ ದರವನ್ನು ಮಾತ್ರ ಏರಿಕೆ ಮಾಡಿ , ಉಳಿದಂತೆ ಜನ ಸಾಮಾನ್ಯರಿಗೆ 55 ರಿಂದ 60 ರೂ . ನಲ್ಲೇ ಮಾರಾಟ ಮಾಡಿ ಎಂದು ಕಾಫ್ ಮುಖಂಡರು ಸಲಹೆ ಮಾಡಿದ್ದಾರೆ .


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ