Breaking News

2 ದಿನ ಫಾರ್ಮ್ ಹೌಸ್ ನಲ್ಲಿರಿಸಿ ಯುವತಿ ಮೇಲೆ ಅತ್ಯಾಚಾರ :ಬಿಜೆಪಿ ನಾಯಕ ಸೇರಿ ನಾಲ್ವರು ಅರೆಸ್ಟ್

Spread the love

ಮಧ್ಯಪ್ರದೇಶ : ಶಾಲಾ ಶಿಕ್ಷಕ ಹಾಗೂ ಸ್ಥಳೀಯ ಬಿಜೆಪಿ ನಾಯಕ ಸೇರಿ ನಾಲ್ವರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಬೆಳಕಿಗೆ ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.20 ವರ್ಷದ ಯುವತಿಯನ್ನು 2 ದಿನ ಫಾರ್ಮ್​ ಹೌಸ್​ನಲ್ಲಿರಿಸಿ ನಾಲ್ವರು ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಫೆ. 18ರಂದು ಈ ಘಟನೆ ನಡೆದಿದ್ದು, ದಿನಸಿ ಸಾಮಾನುಗಳನ್ನು ತರಲು ಯುವತಿ ಹೋಗಿದ್ದಳು.

ಈ ವೇಳೆ ಅಡ್ಡಗಟ್ಟಿದ ಕಾಮುಕರು ಆಕೆಯನ್ನು ಫಾರ್ಮ್​ ಹೌಸ್​ಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದುಬಂದಿದೆ. ಅಂಗಡಿಯ ಸಮೀಪದಲ್ಲಿ ಯುವತಿ ಸಂಬಂಧಿಕರ ಮನೆ ಇರುವುದರಿಂದ ತಮ್ಮ ಮಗಳು ಅವರ ಮನೆಗೆ ಹೋಗಿರಬಹುದು ಎಂದು ಪೋಷಕರು ಸುಮ್ಮನಾಗಿದ್ದರು. ಆದರೆ, ಮರು ದಿನವೂ ಮಗಳು ಮನೆಗೆ ಬಾರದ ಹಿನ್ನೆಲೆ ಸಂಬಂಧಿಕರನ್ನು ವಿಚಾರಿಸಿದಾಗ ಯುವತಿ ನಾಪತ್ತೆಯಾಗಿರುವುದು ತಿಳಿದಿದೆ.

ಮಗಳಿಗಾಗಿ ಹುಡುಕಾಟ ನಡೆಸಿದ್ರೂ ಪ್ರಯೋಜವಾಗಿರಲಿಲ್ಲ. 2 ದಿನಗಳ ಬಳಿಕ ಊರಿನಿಂದಾಚೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ಊರಿನವರು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. 2 ದಿನಗಳ ಕಾಲ ನಿರಂತರ ಅತ್ಯಾಚಾರದಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾಳೆ.

ಜೈತ್​ಪುರ ಬಿಜೆಪಿ ನಾಯಕ ವಿಜಯ್ ತ್ರಿಪಾಠಿ ಮತ್ತು ಆತನ ಮೂವರು ಸ್ನೇಹಿತರು ಸೇರಿ ಈ ಅತ್ಯಾಚಾರ ಎಸಗಿರುವುದು ತನಿಖೆ ವೇಳೆ ಬಯಲಾಗಿದೆ. ಆ ಮೂವರಲ್ಲಿ ಒಬ್ಬ ಶಾಲಾ ಶಿಕ್ಷಕನಾಗಿದ್ದಾನೆ. ಪೊಲೀಸರು ನಾಲ್ವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ವಿಜಯ್ ತ್ರಿಪಾಠಿ ಮತ್ತು ಮೂವರು ನನ್ನನ್ನು ಕಿಡ್ನಾಪ್ ಮಾಡಿ ಫಾರ್ಮ್​ಹೌಸ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯ್ ತ್ರಿಪಾಠಿ ಮೇಲೆ ಅತ್ಯಾಚಾರದ ಕೇಸ್ ದಾಖಲಾಗುತ್ತಿದ್ದಂತೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆತನನ್ನು ವಜಾಗೊಳಿಸಲಾಗಿದೆ. ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟ ವಿಜಯ್ ಈಗ ಪೊಲೀಸರ ವಶದಲ್ಲಿದ್ದಾನೆ. ಆತನನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಮಧ್ಯಪ್ರದೇಶದ ಬಿಜೆಪಿ ಬಿಡುಗಡೆ ಮಾಡಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ