Breaking News

ಹೊಸ ಕಾಯ್ದೆಯಿಂದ ಎಪಿಎಂಸಿಗಳು ಮತ್ತಷ್ಟು ಆರ್ಥಿಕವಾಗಿ ನೆಲ ಕಚ್ಚಿದ್ದು, ಬರುವ ಆದಾಯದಲ್ಲಿ ಗಣನೀಯ ಇಳಿಕೆ

Spread the love

ಚಿಕ್ಕೋಡಿ: ಗ್ರಾಹಕ-ವರ್ತಕರ ನಡುವೆ ಮುಕ್ತ ವ್ಯಾಪಾರ ಕಲ್ಪಿಸಿದಾಗಲೇ ಎಪಿಎಂಸಿ ಬಲ ಕುಗ್ಗಿ ಹೋಗಿತ್ತು. ಈಗ ಹೊಸ ಕಾಯ್ದೆಯಿಂದ ಎಪಿಎಂಸಿಗಳು ಮತ್ತಷ್ಟು ಆರ್ಥಿಕವಾಗಿ ನೆಲ ಕಚ್ಚಿದ್ದು, ಬರುವ ಆದಾಯದಲ್ಲಿ ಗಣನೀಯ ಇಳಿಕೆ ಕಂಡು ಚೇತರಿಸಿಕೊಳ್ಳಲಾಗದ ಸ್ಥಿತಿ ಎಪಿಎಂಸಿಗೆ ಬಂದಿದೆ.

ಹೌದು. ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ನಿಪ್ಪಾಣಿ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ವ್ಯಾಪಾರು-ವಹಿವಾಟು ಇಲ್ಲವೇ ಇಲ್ಲ. ಕೇವಲ ವಾಣಿಜ್ಯ ಮಳಿಗೆಯಿಂದ ಬರುತ್ತಿದ್ದ 20ರಿಂದ 25 ಲಕ್ಷ ರೂ. ವರಮಾನ ಈ ವರ್ಷ 50 ಸಾವಿರಕ್ಕೆಕುಸಿದಿದೆ. ಎಪಿಎಂಸಿ ಕಾಯ್ದೆಯಿಂದ ವ್ಯಾಪಾರ- ವಹಿವಾಟು ಕುಸಿತಕೊಂಡು ಆದಾಯದಲ್ಲಿ ಗಣನೀಯ ಇಳಿಕೆ ಕಂಡು ಬರಲಾರಂಭಿಸಿದೆ.

ಬರುವ ದಿನಮಾನಗಳಲ್ಲಿ ಎಪಿಎಂಸಿ ಎಲ್ಲಿವೆ ಎಂದುಹುಡುಕಾಡುವ ಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ಪ್ರಜ್ಞಾವಂತ ರೈತರು. ರಾಜ್ಯದಲ್ಲಿ ಇರುವ ಎಪಿಎಂಸಿಗಳಲ್ಲಿ ವ್ಯಾಪಾರ- ವಹಿವಾಟು ನಡೆಯುತ್ತವೆ. ಆದರೆ ನಿಪ್ಪಾಣಿ ಎಪಿಎಂಸಿ ಪ್ರಾಂಗಣದಲ್ಲಿ ಮೊದಲಿನಿಂದಲೂವ್ಯಾಪಾರ- ವಹಿವಾಟು ಮಾಡುವ ಪರಂಪರೆ ಇಲ್ಲ.ಎಪಿಎಂಸಿಯಿಂದ ಕೆಲ ಕಡೆಗಳಲ್ಲಿ ನಿರ್ಮಿಸಿರುವವ್ಯಾಪಾರಿ ದಿಂದ ಬರುವ ಆದಾಯವೇ ಎಪಿಎಂಸಿಗೆ ವರಮಾನ.ಆದರೆ ಕಳೆದೊಂದು ವರ್ಷದಿಂದ ಬರುವ ಆದಾಯ ಗಣನೀಯವಾಗಿ ಇಳಿಕೆ ಕಂಡು ಬಂದಿರುವ ಪರಿಣಾಮ ಮುಂದಿನ ದಿನಮಾನಗಳಲ್ಲಿ ಎಪಿಎಂಸಿಇರುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಅಧಿ ಕಾರಿಗಳನ್ನು ಕಾಡುತ್ತಿದೆ.

ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮೊದಲು ಎಪಿಎಂಸಿ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿಗೆ ಅವಕಾಶ ಮಾಡಿಕೊಟ್ಟು ಅದರಿಂದ ಸೆಸ್‌ ಸಂಗ್ರಹಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ನಂತರ ಆಡಳಿತ ಮಂಡಳಿಗೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ಸೆಸ್‌ ಸಂಗ್ರಹಿಸುವ ಅವಕಾಶ ಇಲ್ಲ. ಇದು ಎಪಿಎಂಸಿ ಆದಾಯದಲ್ಲಿ ಇಳಿಕೆಯಾಗಲು ಕಾರಣವಾಗಿದೆ ಎನ್ನುತ್ತಾರೆ ರೈತರು.

ಸಿಬ್ಬಂದಿ ಕೊರತೆ: ನಿಪ್ಪಾಣಿ ಎಪಿಎಂಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ. ಎಪಿಎಂಸಿಯ ಸುಮಾರು 11ಜನಸಿಬ್ಬಂದಿಗಳಲ್ಲಿ ಕೇವಲ ಮೂರು ಜನ ಮಾತ್ರಕರ್ತವ್ಯ ನಿರ್ವಹಿಸುತ್ತಿದ್ದಾರೆ. 8 ಜನ ಸಿಬ್ಬಂದಿಯನ್ನುತೆಗೆದಿದ್ದಾರೆ. ಸರ್ಕಾರ ಮಾಡಿರುವ ಕಾಯ್ದೆಯ ತಿದ್ದುಪಡೆ ಮತ್ತು ಮುಕ್ತ ವ್ಯಾಪಾರ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.

ಇದ್ದೂ ಇಲ್ಲದಂತಾಗಿದೆ ದನಗಳ ಪೇಟೆ: ನಿಪ್ಪಾಣಿ ಎಪಿಎಂಸಿ ವತಿಯಿಂದ ನಿಪ್ಪಾಣಿ ಹೊರವಲಯದಲ್ಲಿ ಪ್ರತಿ ಶುಕ್ರವಾರ ಜಾನುವಾರ ಸಂತೆ ನಡೆಯುತ್ತದೆ.ಆದರೆ ದನಗಳ ಸಂತೆಯಿಂದ ನಿರೀಕ್ಷೆ ಮಾಡಿದಷ್ಟುವರಮಾನ ಬರುತ್ತಿಲ್ಲ, ಒಂದು ಜಾನುವಾರು,ಮೇಕೆ, ಕುರಿ ಮಾರಾಟವಾದರೆ 5 ರೂ. ಸೆಸ್‌ ತೆಗೆದುಕೊಳ್ಳಬೇಕೆಂದು ನಿಯಮ ಇದೆ. ಆದರೆ ಯಾವುದೇ ದನಗಳು ಮಾರಾಟವಾಗಿಲ್ಲ ಎಂದುರೈತರು ಸಬೂಬು ಹೇಳಿ ಹಾಗೆಯೇ ಹೋಗುತ್ತಾರೆ.ಪ್ರತಿ ವಾರ ನಡೆಯುವ ದನಗಳ ಸಂತೆಯಲ್ಲಿ 400 ರೂ. ವರಮಾನವಾಗಲು ಹರಸಾಹಸ ಪಡಬೇಕಾಗುತ್ತಿದೆ. ಪೇಟೆಯಲ್ಲಿ ಸಂಗ್ರಹವಾಗುವ ವರಮಾನ ಕುಡಿಯುವನೀರು, ವಿದ್ಯುತ್‌ ಬಿಲ್‌ಗ‌ೂಗೆ ಸಾಕಾಗಲ್ಲ ಎನ್ನುತ್ತಾರೆ ಅಧಿಕಾರಿಗಳು.

ಆದಾಯ ಕೊರತೆಯಿಂದ ಸಿಬ್ಬಂದಿ ಔಟ್‌:

ಎಪಿಎಂಸಿಗಳು ಉತ್ತಮವಾಗಿ ನಡೆಯಲು ಸಮರ್ಪಕ ಸಿಬ್ಬಂದಿ ಅವಶ್ಯ. ಆದರೆ ಭದ್ರತಾ ಸಿಬ್ಬಂದಿ, ವಾಹನ ಚಾಲಕರು ಮತ್ತು ಸಿಪಾಯಿ ಸೇರಿದಂತೆ ಅನೇಕ ಸಿಬ್ಬಂದಿ ಆದಾಯ ಕುಂಠಿತವಾಗಿರುವ ಪರಿಣಾಮ ತೆಗೆದು ಹಾಕಿದ್ದಾರೆ. ಇದರಿಂದ ಎಪಿಎಂಸಿಗಳು ನಡೆಯುವುದೇ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡರು

ಎಪಿಎಂಸಿಗಳಿಗೆ ಸೆಸ್‌ ಹೆಚ್ಚಿಸಲು ಆಡಳಿತ ಮಂಡಳಿ ಪ್ರಯತ್ನ ಮಾಡುತ್ತಿತ್ತು. ಆದರೆ ಈಗಿನ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗೆ ಬರುವ ವರಮಾನ ಕಡಿಮೆಯಾಗುತ್ತಿದೆ. ಮೆಕ್ಕೆಜೋಳ, ಸೋಯಾ ಮುಂತಾದ ಬೆಳೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳನ್ನುತಪಾಸಣೆಗೆ ಒಳಪಡಿಸಿ ಸೆಸ್‌ ಸಂಗ್ರಹಿಸಲಾಗುತ್ತಿತ್ತು. ಸರ್ಕಾರದ ತಿದ್ದುಪಡಿಯಿಂದ ಎಪಿಎಂಸಿ ಬಾಗಿಲು ಮುಚ್ಚುತ್ತವೆ. – ಪಿ.ಐ.ಕೋರೆ, ಮಾಜಿ ಅಧ್ಯಕ್ಷರು, ಎಪಿಎಂಸಿ ನಿಪ್ಪಾಣಿ.

ನಿಪ್ಪಾಣಿ ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟು ಇಲ್ಲವಾಗಿದೆ. ವ್ಯಾಪಾರಿ ಮಳಿಗೆ, ಗೋಡೌನ್‌ ಮತ್ತಿತರಕಡೆಯಿಂದ ಬರುವ ವರಮಾನ ಕಡಿಮೆಯಾಗಿದೆ.ಭದ್ರತಾ ಸಿಬ್ಬಂದಿ, ಸಿಪಾಯಿ, ವಾಹನ ಚಾಲಕರನ್ನುತೆಗೆದು ಹಾಕಲಾಗಿದೆ. ಈಗ ಎಪಿಎಂಸಿ ನಿರ್ವಹಣೆಮಾಡುವುದೇ ಕಷ್ಟಕರವಾಗಿದೆ. ಎಪಿಎಂಸಿ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. – ಬಿ.ಎಸ್‌.ಬಾವಿಹಾಳ, ಕಾರ್ಯದರ್ಶಿ ,ಎಪಿಎಂಸಿ ನಿಪ್ಪಾಣಿ

ಕಾರ್ಪೋರೇಟ್‌ ಕಂಪನಿಗಳ ತಾಳಕ್ಕೆ ಕುಣಿಯುತ್ತಿರುವ ಸರ್ಕಾರ ಎಪಿಎಂಸಿಗೆ ತಿದ್ದುಪಡಿ ತಂದಿರುವುದು ಎಪಿಎಂಸಿಮುಚ್ಚಲು ಕಾರಣವಾಗಿದೆ. ಎಪಿಎಂಸಿಗೆ ಬಲತುಂಬಬೇಕಾದ ಸರ್ಕಾರವೇ ಎಪಿಎಂಸಿ ಅವನತಿಗೆ ಕಾರಣವಾಗುತ್ತಿದೆ. ಈಗಲೂ ಸರ್ಕಾರ ಕಾಯ್ದೆ ಹಿಂಪಡೆದು ಎಪಿಎಂಸಿಗೆ ಬಲ ತುಂಬಬೇಕು. –ತ್ಯಾಗರಾಜ ಕದಮ್‌ ರೈತ ಸಂಘದ ಮುಖಂಡರು


Spread the love

About Laxminews 24x7

Check Also

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ಸಹಜಾನಂದ ಅವಧೂತರು

Spread the love ಚಿಕ್ಕೋಡಿ: ‘ಭಾರತ ದೇಶವನ್ನು ಧಾರ್ಮಿಕ, ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಕಟ್ಟಲಾಗಿದೆ. ಯುವಕರು ಸಂಸ್ಕಾರವಂತರಾಗಿ ದೇಶದ ಪರಂಪರೆ ಮುಂದುವರಿಸಬೇಕು’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ