Breaking News

ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು ಮಂಜೂರು

Spread the love

ದೆಹಲಿ: ‘ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾದ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿದೆ. ಇನ್ನೋರ್ವ ಆರೋಪಿ ಶಾಂತನು ಮುಲುಕ್ ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಾಳೆ (ಫೆಬ್ರವರಿ 24) ನಡೆಯಲಿದೆ.

ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್​ ಕಾರ್ಮಲ್​ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ದಿಶಾ ರವಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಸ್ಥೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವಿರುದ್ಧ ಅಲೆ ರೂಪಿಸಲು ಟೂಲ್​ಕಿಟ್ ರಚಿಸಿದ ಆರೋಪದಡಿ ಅವರನ್ನು ದೆಹಲಿ ಪೊಲೀಸರು ಏಕಾಏಕಿ ಬೆಂಗಳೂರಿನಲ್ಲಿ ಫೆ.13ರಂದು ಬಂಧಿಸಿದ್ದರು.

ವಾಟ್ಸ್‌ಆಯಪ್ ಚಾಟ್ ಡಿಲೀಟ್ ಮಾಡಿದ್ದಾರೆ. ಆಕೆಗೆ ಕಾನೂನು ಕ್ರಮಗಳ ಬಗ್ಗೆ ಅರಿವು ಇತ್ತು. ಈ ಟೂಲ್ ಕಿಟ್ ವಿನ್ಯಾಸಗೊಳಿಸಿರುವುದರ ಹಿಂದೆ ದುರುದ್ದೇಶವಿದೆ. ಭಾರತಕ್ಕೆ ಅಪಖ್ಯಾತಿ ತರುವುದಕ್ಕೆ ಮತ್ತು ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ದಿಶಾ ಭಾಗಿಯಾಗಿದ್ದಾರೆ. ಖಾಲಿಸ್ತಾನದ ಪರ ವಾದಿಸುವರೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದು ಆಕೆ ಟೂಲ್​ಕಿಟ್ ಸಿದ್ಧಪಡಿಸಿ ಶೇರ್ ಮಾಡಿದ್ದರು. ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷ್ಯ ನಾಶ ಮಾಡಿದ್ದು ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದರು.

ದಿಶಾ ರವಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಜನವರಿ 26ಕ್ಕೆ ಸಂಭವಿಸಿದ ಹಿಂಸಾಚಾರಕ್ಕೂ ಟೂಲ್​ಕಿಟ್​ಗೂ ಏನು ಸಂಬಂಧ ಇದೆ ಎಂಬುದನ್ನು ನೀವು ಪತ್ತೆ ಹಚ್ಚಿದ್ದೀರಿ ಎಂದು ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.​ವಿ.ರಾಜು ಅವರಲ್ಲಿ ಪ್ರಶ್ನಿಸಿತ್ತು.

ಸಾವಿರಾರು ಮಂದಿಗೆ ದೆಹಲಿ ಪ್ರವೇಶಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ನಾನು 10 ಮಂದಿಯನ್ನು ಆಹ್ವಾನಿಸಿದರೆ ತಪ್ಪೇನು? ಸಂಯುಕ್ತ ಕಿಸಾನ್ ಮೋರ್ಚಾ ಪರೇಡ್ ಆಯೋಜಿಸಿತ್ತು, ಅವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಾಗಿದೆಯೇ? ದೇಶದ್ರೋಹಿಗಳೊಂದಿಗ ಮಾತನಾಡಿದರೆ ನಾವು ದೇಶದ್ರೋಹಿಗಳಾಗುತ್ತೇವೆಯೇ? ಯಾವುದೇ ಒಂದು ವೇದಿಕೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹೇಳುವುದು ಅಪರಾಧವಲ್ಲ. ದೆಹಲಿ ಪೊಲೀಸರು ದಿಶಾ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ದಿಶಾ ಅವರ ವಕೀಲರು ಹೇಳಿದ್ದಾರೆ.

ಟೂಲ್​ಕಿಟ್ ಸಂಬಂಧ, ಖಾಸಗಿ ಚಾಟ್ (ವಾಟ್ಸಾಪ್ ಸಂದೇಶಗಳು) ಮಾಧ್ಯಮಕ್ಕೆ ಸೋರಿಕೆಯಾಗದಂತೆ ತಡೆಯಬೇಕು ಎಂದು 22 ವರ್ಷ ವಯಸ್ಸಿನ ದಿಶಾ ರವಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ದಿಶಾ ರವಿ ಹಾಗೂ ಮೂರನೇ ವ್ಯಕ್ತಿಯ ಜತೆ ನಡೆಸಿದ ಸಂವಹನ ಸಂದೇಶಗಳನ್ನು ಸಾಮಾಜಿಕವಾಗಿ ಹರಿಯಬಿಡಬಾರದು ಎಂದು ಕೋರಿದ್ದರು.

ದಿಶಾ ರವಿ ತನಿಖೆ ಹಾಗೂ FIR ಕುರಿತಾದ ಯಾವುದೇ ಖಾಸಗಿ ವಿಚಾರಗಳನ್ನು ಮಾಧ್ಯಮ ಸೋರಿಕೆ ಮಾಡಬಾರದು ಎಂದು ದೆಹಲಿ ಹೈಕೋರ್ಟ್ ಇಂದು (ಫೆ.19) ನೋಟೀಸ್ ನೀಡಿದೆ. ಟೂಲ್​ಕಿಟ್ ಪ್ರಕರಣದ ಖಾಸಗಿ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗಬಾರದು ಎಂದು ಕೋರ್ಟ್, ನ್ಯೂಸ್ ಬ್ರಾಡ್​ಕಾಸ್ಟಿಂಗ್ ಅಥಾರಿಟಿ (NBSA)ಗೆ ತಿಳಿಸಿದೆ.


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ