Breaking News

ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಅನುದಾನ ಕೊಡ್ತೇನೆ :ಸಿದ್ದರಾಮಯ್ಯ

Spread the love

ಮಂಗಳೂರು: ಈ ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲು ಕೊಡಬೇಕು. ಅಲ್ಪಸಂಖ್ಯಾತರಿಗೆ ಮೂರುಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುತ್ತೇನೆ ಎಂದು ಮಾಜಿ ಸಿಎಂ‌ ಸಿದ್ಧರಾಮಯ್ಯ ಹೇಳಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ನಡೆದ ಭಾವೈಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಇದ್ದ ಅನುದಾನದಲ್ಲೂ ಕಡಿಮೆ ಮಾಡಿದ್ದಾರೆ. ಬಿಜೆಪಿಯವರು ಸಂವಿಧಾನ ವಿರೋಧಿಗಳು. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಣೆ ಮಾಡುತ್ತಿಲ್ಲ. ಸಂವಿಧಾನದ ಬದಲಾವಣೆ ಬಗ್ಗೆ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಅನಂತ ಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಸದಸ್ಯನಾಗೋಕ್ಕು ನಾಲಾಯಕ್ ಎಂದು ಹೇಳಿದ್ದಾರೆ.

ಹಿಂದೂಗಳಲ್ಲೂ ಅನೇಕ ಜನ ಮುಸ್ಲಿಂ ರ ರೀತಿ ಇದ್ದಾರೆ; SFI ಮತ್ತು PFI ಎರಡೂ ಒಂದೇ. PFI, SDPI ಯವರ ಮಾತುಗಳನ್ನು ಕೇಳೋಕೆ ಹೋಗಬೇಡಿ. ಇವರು ಬಿಜೆಪಿಗೆ ಹಿಂದುಗಡೆಯಿಂದ ಸಪೋರ್ಟ್ ಮಾಡುವವರು. ಬಿಹಾರದ ಚುನಾವಣೆಯಲ್ಲೂ ಇವರಿಂದ ಬಿಜೆಪಿಗೆ ಲಾಭವಾಯಿತು. ಮುಸ್ಲಿಂ ರ ಓಟನ್ನು ಒಡೆಯುವಂತಹ ಹುನ್ನಾರ ಮಾಡುತ್ತಿದ್ದಾರೆ. ಈ ಹುನ್ನಾರಕ್ಕೆ ಯಾರೂ ಕೈ ಜೋಡಿಸಬಾರದು. ಬೆಂಗಳೂರು ಗಲಭೆ ಸಂಧರ್ಭದಲ್ಲಿ SDPI, PFI ಬ್ಯಾನ್ ಅಂತಾ ಹೇಳಿದ್ರು. ಸೂಕ್ತ ದಾಖಲೆಯಿದ್ದರೆ ಕೂಡಲೇ ಬ್ಯಾನ್ ಮಾಡಬೇಕು ಎಂದು ಸವಾಲು ಹಾಕಿದ್ದಾರೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ