Breaking News

ತುಂಡಾಗಿ ಹೋಗಿದ್ದ ಐದು ವರ್ಷದ ಬಾಲಕಿಯ ಕೈಯನ್ನು ಹತ್ತು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ವಿಜಯಾ ಆಸ್ಪತ್ರೆಯ ವೈದ್ಯರು.

Spread the love

ಬೆಳಗಾವಿ- ಬಸ್ಸಿನಲ್ಲಿ ಸಂಚರಿಸುವಾಗ ಕಿಟಕಿಯಿಂದ ಕೈ ಹೊರಗೆ ಪರಿಣಾಮ ತುಂಡಾಗಿ ಹೋಗಿದ್ದ ಐದು ವರ್ಷದ ಬಾಲಕಿಯ ಕೈಯನ್ನು ಹತ್ತು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೋಡಣೆ ಮಾಡುವಲ್ಲಿ ಬೆಳಗಾವಿಯ ವಿಜಯಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

12/06/2019 ರಂದು ಕುಮಾರಿ ಆಯಾ ಶೇಖ ಎಂಬ ಐದು ವರ್ಷದ ಚಿಕ್ಕ ಹುಡುಗಿ ಬಸ್ಸಿನಲ್ಲಿ
ಸಂಚರಿಸುತ್ತಿರುವಾಗ ಮಳೆಯ ನೀರನ್ನು ಹಿಡಿಯಲೆಂದು ಕಿಟಕಿಯಿಂದ ಬಲ ಕೈಯನ್ನು ಹೊರಚಾಚಿದಾಗ,
ಎದುರಗಡೆಯಿಂದ ಬರುತ್ತಿರುವ ಇನ್ನೊಂದು ವಾಹನಕ್ಕೆ ಈ ಬಡೆದು ತುಂಡಾಗಿ ಹೋಗಿತ್ತು.

ಆ ಚಿಕ್ಕ ಹುಡುಗಿಯನ್ನು ತಕ್ಷಣ ಪ್ರತಿಷ್ಟಿತ (VOTC24x7) ಆಸ್ಪತ್ರೆಯ ತುರ್ತು
ನಿಭಾ ಘಟಕ್ಕೆ ತರಲಾಯಿತು. ಮುಖ್ಯ ಹಾಗು ಪ್ರಧಾನ ಪ್ಲಾಸ್ಟಿಕ್ ಸರ್ಜನರಾದ ಡಾ. ವಿಜ್ಜಲ ಮಾಲಮಂಡೆ
ಪ್ರಥಮ ಚಿಕಿತ್ಸೆ ಹಾಗು ಸಂಪೂರ್ಣ ತಪಾಸಣೆ ಮಾಡಿದರು. ಖ್ಯಾತ ವೈದ್ಯರಾದ ಡಾ. ರವಿ ಬಿ ಪಾಟೀಲ ಅವರಮಾರ್ಗದರ್ಶನದಲ್ಲಿ ತುಂಡಾದ ಕೈಯನ್ನು ಮರುಜೋಡನೆ ಮಾಡಬಹುದು ಎಂದು ತಿರ್ಮಾನಿಸಲಾಯಿತು.

ಸುದೀರ್ಘ ಹತ್ತು ಘಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಪ್ರಧಾನ ಪ್ಲಾಸ್ಟಿಕ್ ಸರ್ಜನರಾದ ಡಾ ಎಚ್ಚಲ
ಮಾಲಮಂಡೆ, ಡಾ ಶುಭ ದೆಸಾಯಿ ( ಪ್ಲಾಸ್ಟಿಕ್ ಸರ್ಜನ), ಡಾ ಆರದಿಂದ ಹಂಪಣ್ಣವರ (ಚಿಕ್ಕ ಮಕ್ಕಳ
ವಿರುವ ಕಿಳು ತಜ್ಞರು), ಡಾ ಶ್ರೀಧರ ಕಟದಳ ಹಾಗೂ ಶ್ರೀಧರ ಕಲಕೇರಿ ಯವರನ್ನು ಒಳಗೊಂಡ
ತಂಡದೊಂದಿಗೆ ತುಂಡಾದ ಕೃಯನ್ನು ಯಶಸ್ವಿಯಾಗಿ ಮರು ಜೋಡಣೆ ಮಾಡಲಾಗಿದೆ ಎಂದು ಡಾ. ರವಿ ಪಾಟೀಲ ಹೇಳಿದರು.


Spread the love

About Laxminews 24x7

Check Also

ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

Spread the love ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ ಯಮಕಮರಡಿ: ನೇಕಾರರ ಸಮಗ್ರ ಅಭಿವೃದ್ಧಿಗೆ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ