ಕಲಬುರಗಿ : ಅಭಿವೃದ್ಧಿ ಬಗ್ಗೆ ತಾರಾತಮ್ಯ ನಡೆದಿಲ್ಲ. ಐಐಟಿ ಬಂದಾಗ ಧಾರವಾಡ ಮತ್ತು ರಾಯಚೂರಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಏಮ್ಸ್‌ಗೆ ಎಲ್ಲರ ಬೇಡಿಕೆ ಇರುತ್ತದೆ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳೊದು ಕೇಂದ್ರ ಸರ್ಕಾರ. ಹೀಗಾಗಿ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದು ಹೇಳಿದರು.
ಪ್ರತ್ಯೇಕ ರಾಜ್ಯದ ಬಗ್ಗೆ ಇಷ್ಟು ಮಹತ್ವ ಕೊಡುವುದು ಸರಿಯಲ್ಲ. ನಮ್ಮ ಪೂರ್ವಜರು ಅಖಂಡ ಕರ್ನಾಟಕಕ್ಕೆ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಂತಾ ನಾಮಕರಣ ಮಾಡಿರೋದು ಕಲ್ಯಾಣ ಆಗಲಿ ಎಂದು. ಕಲ್ಯಾಣ ಕರ್ನಾಟಕ ಶ್ರೀಮಂತ ಆಗಲಿ ಎಂಬುದೇ ನಮ್ಮ ಆಶಯ. ಆಶಾವಾದ ಇರಬೇಕು ನಿರಾಶಾವಾದ ಬೇಡ. ಕೊರೊನಾದಿಂದ ಸಾಕಷ್ಟು ಹಣಕಾಸಿನ ತೊಂದರೆ ಆಗಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.