Breaking News

3 ದಿನ ಹೆಂಡ್ತಿ, ಇನ್ಮೂರು ದಿನ ಲವರ್ ನೊಂದಿಗೆ ಇರಲು ವ್ಯಕ್ತಿಗೆ ಸೂಚನೆ..!ಪೊಲೀಸರ ವಿಚಿತ್ರ ಪರಿಹಾರ ಸೂತ್ರ..!

Spread the love

ರಾಂಚಿ : ಪ್ರೇಯಸಿ – ಹೆಂಡತಿ ವಿಚಾರವಾಗಿ ಉದ್ಭವವಾಗಿದ್ದ ಸಮಸ್ಯೆವೊಂದಕ್ಕೆ ಜಾರ್ಖಂಡ್​ ಪೊಲೀಸರು ವಿಚಿತ್ರವಾದ ಪರಿಹಾರ ನೀಡಿದ್ದು, ಮೂರು ದಿನ ಹೆಂಡತಿ ಹಾಗೂ ಇನ್ಮೂರು ದಿನ ಲವರ್​ನೊಂದಿಗೆ ಕಾಲ ಕಳೆಯುವಂತೆ ಪರಿಹಾರ ನೀಡಿದ್ದಾರೆ. ರಾಂಚಿಯ ಕೊಕಾರ್​​ನ ತಿರ್ಲಿ ರೋಡ್​ನಲ್ಲಿ ರಾಜೇಶ್ ಮೆಹ್ತಾ ವಾಸವಾಗಿದ್ದು, ಮದುವೆಯಾದ ನಂತರವೂ ಈತ ಬೇರೆ ಯುವತಿ ಜತೆ ಸಂಪರ್ಕವಿಟ್ಟುಕೊಂಡಿದ್ದ. ಅಷ್ಟೇ ಏಕೆ ಆಕೆ ಜತೆ ಓಡಿ ಹೋಗಿದ್ದ. ಹೀಗಾಗಿ ಹೆಂಡತಿ ಹಾಗೂ ಮಗು ಅನಾಥವಾಗಿದ್ದವು.

ಗಂಡ ಓಡಿ ಹೋಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಇದೇ ವೇಳೆ ಆತನೊಂದಿಗೆ ಓಡಿ ಹೋದ ಯುವತಿ ಮನೆಯವರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ರಾಜೇಶ್ ಮೆಹ್ತಾನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಕೂಡಾ ಆಗಿದ್ದಾರೆ.

ಆದರೆ ಓಡಿ ಹೋಗಿದ್ದ ಮೆಹ್ತಾ ತಾನು ಕರೆದುಕೊಂಡು ಹೋಗಿದ್ದ ಯುವತಿ ಜತೆ ಮದುವೆ ಮಾಡಿಕೊಂಡಿದ್ದ. ಈ ಸಂಬಂಧ ಗಂಡ- ಹೆಂಡತಿ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಹೀಗಾಗಿ ಮಧ್ಯಪ್ರವೇಶ ಮಾಡಿರುವ ಪೊಲೀಸರು ಮೂರು ದಿನ ಹೆಂಡ್ತಿ ಜತೆ ಹಾಗೂ ಮೂರು ದಿನ ಗರ್ಲ್​ಫ್ರೆಂಡ್​ ಜತೆ ಕಾಲಕಳೆಯುವಂತೆ ಪರಿಹಾರ ನೀಡಿದ್ದಾರೆ. ಇನ್ನೂ ವಿಶೇಷ ಎಂದರೆ ಇಬ್ಬರ ನಡುವೆ ಮೂರು ದಿನಗಳ ಪರಿಹಾರ ಸೂಚಿಸಿರುವ ಪೊಲೀಸರು ವಾರದ ಕೊನೆಯ ದಿನ ಗಂಡನಿಗೆ ವಿಕ್​ ಆಫ್​ ನೀಡಿದ್ದಾರೆ.

ಈ ಒಪ್ಪಂದಕ್ಕೆ ಇಬ್ಬರು ಮಹಿಳೆಯರು ಪೊಲೀಸರ ಮುಂದೆ ಸಹಿ ಕೂಡ ಮಾಡಿದ್ದಾರೆ. ವಿಚಿತ್ರ ಎಂದರೆ, ಇಂತಹದೊಂದು ಒಪ್ಪಂದ ಆಗಿ ಒಂದೇ ವಾರದಲ್ಲಿ ರಾಜೇಶ್ ಜತೆ ಓಡಿ ಹೋಗಿದ್ದ ಮಹಿಳೆ ರಾಜೇಶ್ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆಂದು ದೂರು ದಾಖಲು ಮಾಡಿದ್ದು, ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಈ ಮಧ್ಯೆ ಆತ ತಲೆಮೆರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ