ಬೆಳಗಾವಿ: ಸದಾ ಒಂದಿಲ್ಲದೊಂದು ವಿವಾದಗಳಿಂದ ಹೆಸರುವಾಸಿಯಾಗುತ್ತಿರುವ ಇಲ್ಲಿನ ಬಿಮ್ಸ್ ಆಸ್ಪತ್ರೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಕೊರೊನಾ ಸೋಂಕಿತರ ಶವ ಅದಲು ಬದಲು ಮಾಡಿ ಮತ್ತೆ ಸುದ್ದಿಯಾಗಿದೆ.
ಕ್ಯಾಂಪ್ ನಗರದ 57 ವರ್ಷದ ವೃದ್ದೆ ಶವ ಅದಲು ಬದಲಾಗಿದೆ. ಕಳೆದ ಶನಿವಾರ ಮೃತ ವೃದ್ದೆಯ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದ್ರೆ ಆಸ್ಪತ್ರೆ ಸಿಬ್ಬಂದಿ ಮತ್ತೆ ಕರೆ ಮಾಡಿ, ಯಾಕೆ ಇನ್ನು ನೀವು ಶವ ತಗೆದುಕೊಂಡು ಹೋಗಿಲ್ಲ?. ಕೂಡಲೇ ಬಂದು ಶವ ತಗೆದುಕೊಂಡು ಹೋಗುವಂತೆ ಹೇಳಿದ್ದಾರೆ.
ಇದರಿಂದ ಗೊಂದಲಕ್ಕೀಡಾದ ವೃದ್ದೆಯ ಸಂಬಂಧಿಕರು ನಾವು ಯಾರ ಶವ ಅಂತ್ಯಕ್ರಿಯೆ ಮಾಡಿದ್ದೇವು ಎಂಬ ಚಿಂತೆಯಲ್ಲಿದ್ದಾರೆ. ಒಂದೇ ಕುಟುಂಬಕ್ಕೆ ಎರಡು ಶವ ಹಸ್ತಾಂತರಿಸುತ್ತಿರುವ ಆಸ್ಪತ್ರೆ ವಿರುದ್ದ ಪೊಲೀಸ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇಬ್ಬರು ಕೊರೊನಾ ಸೋಂಕಿತರು ನರಳಾಡಿ ಪ್ರಾಣ ಬಿಟ್ಟಿದ್ದರು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದವು. ಇದರಿಂದ ಜನರು ಬಿಮ್ಸ್ ಆಸ್ಪತ್ರೆ ಛಿಮಾರಿ ಹಾಕಿದ್ದರು.
Laxmi News 24×7