Breaking News

ಗ್ಯಾಸ್ ಸಿಲಿಂಡರ್ ಗೆ ಸಿಕ್ತಿದೆಯಾ ಸಬ್ಸಿಡಿ…? ಹೀಗೆ ಚೆಕ್ ಮಾಡಿ

Spread the love

ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಅನಿಲವಿದೆ. ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ನೀಡಲು ಗ್ಯಾಸ್ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ವಿವಿಧ ರಾಜ್ಯಗಳಲ್ಲಿ ಸಬ್ಸಿಡಿ ಬೇರೆ ಬೇರೆಯಿದೆ. ವಾರ್ಷಿಕ ಆದಾಯ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರುವ ಜನರಿಗೆ ಈ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ. ಅನೇಕರ ಖಾತೆಗೆ ಸಬ್ಸಿಡಿ ಬರುತ್ತದೆ. ಆದ್ರೆ ಜನರಿಗೆ ಖಾತೆಗೆ ಹಣ ಬಂದಿರುವುದು ಗೊತ್ತಾಗುವುದಿಲ್ಲ. ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯಾ ಎಂಬುದನ್ನು ಸುಲಭವಾಗಿ ನೋಡಬಹುದು.

ಮೊದಲು ಇಂಡೇನ್ ಗ್ಯಾಸ್‌ನ ಅಧಿಕೃತ ವೆಬ್‌ಸೈಟ್‌ https://bit.ly/3rU6Lol ಗೆ ಭೇಟಿ ನೀಡಬೇಕು. ಅಲ್ಲಿ ಸಿಲಿಂಡರ್‌ ಚಿತ್ರ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಂಪ್ಲೆಂಟ್ ಬಾಕ್ಸ್ ಓಪನ್ ಆಗುತ್ತದೆ. ಅದ್ರ ಮೇಲೆ ಸಬ್ಸಿಡಿ ಸ್ಟೇಟಸ್ ಎಂದು ಟೈಪ್ ಮಾಡಿ ಮುಂದುವರಿಕೆ ಮೇಲೆ ಕ್ಲಿಕ್ ಮಾಡಿ. ಈಗ ಸಬ್ಸಿಡಿ ಸಂಬಂಧಿತ ಬಟನ್ ಕ್ಲಿಕ್ ಮಾಡಿ, ಅದರ ನಂತರ ಹೊಸ ಆಯ್ಕೆ ಸಿಗಲಿದೆ. ಅಲ್ಲಿ ಸಬ್ಸಿಡಿ ನಾಟ್ ರಿಸೀವ್ಡ್ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತ್ರ ವೆರಿಫೈ ಮಾಡಿ ಸಲ್ಲಿಸಬೇಕು.

ಆಗ ಸಬ್ಸಿಡಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಿಗುತ್ತವೆ. ಎಷ್ಟು ಸಬ್ಸಿಡಿ ಸ್ವೀಕರಿಸಿದ್ದೀರಿ ಮತ್ತು ಎಷ್ಟು ಕಳುಹಿಸಲಾಗುತ್ತಿದೆ ಎಂಬುದು ತಿಳಿಯುತ್ತದೆ. ಇಷ್ಟೇ ಅಲ್ಲ ಇಂಡೇನ್ ಕಂಪನಿ ಗ್ರಾಹಕರ ಸೇವೆಗಾಗಿ 1800-233-3555 ಸಂಖ್ಯೆ ನೀಡಿದೆ. ಇಲ್ಲಿಯೂ ಮೊಬೈಲ್ ಸಂಖ್ಯೆ ಅಥವಾ ಗ್ರಾಹಕ ಐಡಿ ನೀಡಿ ಮಾಹಿತಿ ಪಡೆಯಬಹುದು.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ