Breaking News

ರೈತರ ಪ್ರತಿಭಟನೆ ಪರ ಧ್ವನಿಯೆತ್ತಿ ವಿವಾದಕ್ಕೀಡಾದ ಗಾಯಕಿ ರಿಹಾನ್ನಾ ಮೇಲೆ ಮತ್ತೊಂದು ವಿವಾದ

Spread the love

ನ್ಯೂಯಾರ್ಕ್‌: ಭಾರತದಲ್ಲಿನ ರೈತರ ಪ್ರತಿಭಟನೆ ಪರ ಧ್ವನಿಯೆತ್ತಿ, ವಿವಾದಕ್ಕೀಡಾಗಿದ್ದ ಖ್ಯಾತ ಪಾಪ್‌ ಗಾಯಕಿ ರಿಹಾನ್ನಾ ಮತ್ತೂಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಗಣೇಶನ ಪದಕವುಳ್ಳ ನೆಕ್ಲೇಸ್‌ ಧರಿಸಿ, ಟಾಪ್‌ಲೆಸ್‌ನಲ್ಲಿ ಪೋಸು ಕೊಟ್ಟ ಫೋಟೋವೊಂದನ್ನು ರಿಹಾನ್ನಾ ಟ್ವಿಟರಿನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಅರೆಬೆತ್ತಲೆ ರೂಪದ ರಿಹಾನ್ನಾ, ತನ್ನ ಮೈಮಾಟದ ಪ್ರದರ್ಶನಕ್ಕಾಗಿ ಹಿಂದೂ ದೇವರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಮುಗಿಲು ಮುಟ್ಟಿದೆ. “ಭಾರತವನ್ನು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನು ನಿಲ್ಲಿಸಿ’ ಎಂದು ಹಲವರು ಟ್ವೀಟಿಸಿದ್ದಾರೆ.

“ಗಣೇಶನನ್ನು ಅವಮಾನಿಸಿದ್ರೆ, ಹಿಂದೂಗಳು ಫ‌ತ್ವಾ ಹೊರಡಿಸೋದಿಲ್ಲ, ಶಿರಚ್ಛೇದ ಮಾಡೋದಿಲ್ಲ ಅಂತ ರಿಹಾನ್ನಾಗೆ ಚೆನ್ನಾಗಿ ಗೊತ್ತು’ ಎಂದು ಕೆಲವರು ಟ್ವೀಟಿಸಿದ್ದಾರೆ. ಇನ್ನೊಬ್ಬ ಟ್ವೀಟಿಗ, “ರೈತರ ಪ್ರತಿಭಟನೆಗೆ ಬೆಂಬಲಿಸುತ್ತಿರುವ ನೀವು ಸಿಕ್ಖರ ಪವಿತ್ರ ಧ್ವಜ ನಿಶಾನ್‌ ಸಾಹೀಬ್‌ ಧರಿಸಿ, ಈ ಅರೆಬೆತ್ತಲೆ ಪೋಸು ಕೊಡಬೇಕಿತ್ತು’ ಎಂದು ತೀಕ್ಷ್ಣವಾಗಿ ಟ್ವೀಟಿಸಿದ್ದಾರೆ.


Spread the love

About Laxminews 24x7

Check Also

ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ

Spread the love ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ