Breaking News

ವಾಟ್ಸಾಪ್, ಫೇಸ್‌ಬುಕ್‌ಗೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್ ಜಾರಿ

Spread the love

ನವದೆಹಲಿ: ತನ್ನ ಹೊಸ ಖಾಸಗಿತನ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ವಾಟ್ಸಾಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್ ಬುಕ್ ಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ನಾಲ್ಕು ವಾರಗಳಲ್ಲಿ ಟೆಕ್ ದೈತ್ಯರಿಂದ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.

ಭಾರತದಲ್ಲಿ ವಾಟ್ಸಾಪ್ ತನ್ನ ಹೊಸ ಗೌಪ್ಯತಾ ನೀತಿಯನ್ನು ಜಾರಿಗೆ ತರದಂತೆ ನಿರ್ಬಂಧ ಹೇರಬೇಕು ಮತ್ತು ಐರೋಪ್ಯ ಒಕ್ಕೂಟ ಪ್ರದೇಶದಲ್ಲಿ ಬಳಕೆದಾರರಿಗೆ ಅನ್ವಯವಾಗುವ ಗೌಪ್ಯತಾ ನೀತಿಯನ್ನು ಅನ್ವಯಿಸುವಂತೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು, ಯುರೋಪಿಯನ್ನರು ಮತ್ತು ಭಾರತೀಯರ ನಡುವೆ ಅಗಾಧ ವಾದ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು,

Spread the love ರಾಮನಗರ -ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ