ಗುಡಿಬಂಡೆ:- ಪಟ್ಟಣದ ಕುಚ್ಚಪ್ಪ
ನವರ ಜಮೀನಿನಲ್ಲಿ ವನ ಮಹೋತ್ಸವ ಕಾರ್ಯಕ್ರಮಕ್ಕೆ ಪರಿಸರ ವೇದಿಕೆ, ಆರೋಗ್ಯ ಇಲಾಖೆ ಹಾಗೂ ಜಮೀನಿನ ಮಾಲಿಕರು ಚಾಲನೆ ನೀಡಿದರು..
ಈ ವೇಳೆ ಮಾತನಾಡಿದ ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಪರಿಸರ ವೇದಿಕೆಯು ಇತ್ತೀಚಿನ ದಿನಗಳಲ್ಲಿ ಖಾಸಗೀ ಜಮೀನಿನ ರೈತರು ತಮ್ಮ ಸ್ವ ಇಚ್ಛೆಯಿಂದ ಗಿಡಗಳನ್ನು ದತ್ತು ಪಡೆದು ಪೋಷಿತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು..
ನಂತರ ಜಮೀನು ಮಾಲಕರಾದ ನಿರ್ಮಲ ಕೆ ಮಾತನಾಡಿ, ನಾವು ಅರಣ್ಯ ಇಲಾಖೆ ಮತ್ತು ಪರಿಸರ ವೇದಿಕೆಯ ಸಹಕಾರದಿಂದ 50 ಗಿಡಗಳನ್ನು ಪ್ರತೀ ವರ್ಷ ಸುಮಾರು 20ಏಕೆರೆ ಜಮೀನಿನಲ್ಲಿ ಬೆಳೆಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ನಮ್ಮ ಜಮೀನಿನಲ್ಲಿ ದೊಡ್ಡ ವನ ಮಾಡಿ ಜಾಗತಿಕ ತಾಪಮಾನದ ಏರಿಕೆಯನ್ನು ಇಳಿಸಲು ನಮ್ಮ ಚಿಕ್ಕ ಅಳಿಲು ಸೇವೆ ಎಂದರು.
ಈ ವೇಳೆ ಜಿಲ್ಲಾ ಪರಿಸರ ವೇದಿಕೆಯ ಕಾರ್ಯದರ್ಶಿ ಭರತ್ ಮಾತನಾಡಿ, ಇದೇ ರೀತಿ ಪ್ರತಿ ರೈತರು ತಮ್ಮ ಹೊಲಗಳಲ್ಲಿ ಗಿಡಗಳನ್ನು ಬೆಳೆಸಿ ಪೋಷಿಸಿದರೆ ತಾಲ್ಲೂಕು ಹಸಿರುಮಯ ವಾಗಲಿದೆ ಎಂದು ಸಲಹೆ ನೀಡಿದರು.. ಈ ವೇಳೆ ಪರಿಸರ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗುಂಪುಮರದ ಆನಂದ್, ತಾಲ್ಲೂಕು ಅಧ್ಯಕ್ಷ ಬಿ.ಮಂಜುನಾಥ್, ಕಾರ್ಯದರ್ಶಿ ಇಂದ್ರಕುಮಾರ್ ಸಿಂಗ್, ಕನ್ನಡ ಸೇನೆ ಅಧ್ಯಕ್ಷ ಅಂಬರೀಶ್ ಪರಿಸರ ಪ್ರೇಮಿಗಳಾದ ಗೋಪಿ, ಸತೀಶ್, ಚನ್ನರಾಗಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಗಾಂಧಿ ಶ್ರೀನಿವಾಸ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು..
Laxmi News 24×7