ಬೆಂಗಳೂರು, ಫೆ 11: ಕಳೆದ ಕೇಂದ್ರ ಬಜೆಟ್ ನಲ್ಲಿ ನರೇಂದ್ರ ಮೋದಿ ಸರಕಾರ ಮದ್ಯಪ್ರಿಯರಿಗೆ ಶಾಕ್ ನೀಡಿತ್ತು, ಈಗ, ರಾಜ್ಯ ಬಜೆಟ್ ಸರದಿ. ಮೂಲಗಳ ಪ್ರಕಾರ, ಮತ್ತೆ ಮದ್ಯದ ಬೆಲೆ ಹೆಚ್ಚಾಗಲಿದೆ.
ದಿನೋಪಯೋಗಿ ವಸ್ತುಗಳ ಬೆಲೆಯನ್ನು ಹೆಚ್ಚಿಸಿದರೆ ಸಾರ್ವಜನಿಕರು ಸಿಟ್ಟಾಗುವುದರಿಂದ ಸರಕಾರ ಅವುಗಳ ಬೆಲೆಯನ್ನು ಹೆಚ್ಚಿಸುವ ಮುನ್ನ ಹಲವು ಬಾರಿ ಆಲೋಚಿಸುತ್ತದೆ.
ಆದರೆ, ಮದ್ಯದ ಬೆಲೆಯನ್ನು ಹೆಚ್ಚಿಸಿದರೆ ಬಹಿರಂಗವಾಗಿ ಯಾರೂ ದೂರುವಂತಿಲ್ಲ. ಇದರ ಲಾಭವನ್ನೇ ಪಡೆದುಕೊಳ್ಳುವ ಸರಕಾರ ಮದ್ಯದ ಮೇಲೆ ಶುಂಕ, ಹೆಚ್ಚುವರಿ ಟ್ಯಾಕ್ಸ್ ಅನ್ನು ವಿಧಿಸುತ್ತಲೇ ಬರುತ್ತಿವೆ.
ಆ ಇಂದ್ರನನ್ನೇ ಮೀರಿಸುವ ಈ ದೇವೆಂದ್ರನ ಪಾನ ಮಂದಿರ !
ಕೊರೊನಾ ಸಂಕಷ್ಟದಿಂದಾಗಿ ಸರಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದು ಕೊಡುವ ಇಲಾಖೆಯೆಂದರೆ ಅದು ಅಬಕಾರಿ ಇಲಾಖೆ. ಬೆಲೆಯಲ್ಲಿ ಎಷ್ಟೇ ಏರಿಕೆಯಾದರೂ, ಜನರು ಇದನ್ನು ಬಳಸದೇ ಇರುವುದಿಲ್ಲ ಎನ್ನುವ ವಿಶ್ವಾಸ ಸರಕಾರಕ್ಕೆ ಇರುವುದರಿಂದ, ಮುಂದಿನ ತಿಂಗಳು ಮಂಡಿಸಲಾಗುವ ರಾಜ್ಯ ಬಜೆಟ್ ನಲ್ಲಿ ಮತ್ತೆ ಬೆಲೆ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ

ಇಂಡಿಯನ್ ಮೇಡ್ ಲಿಕ್ಕರ್ ಗಳ ಮೇಲೆ ಅಬಕಾರಿ ಸುಂಕ ವಿಧಿಸಲು ಸರಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿಗಳು ಅಬಕಾರಿ ಸಚಿವರು, ಸಚಿವಾಲಯದ ಅಧಿಕಾರಿಗಳು ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ರಾಜ್ಯ ಬಜೆಟ್ ಅನ್ನು ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಮಾರ್ಚ್ ಮೊದಲ ವಾರದಲ್ಲಿ ಮಂಡಿಸಲಿದ್ದಾರೆ.
ಐಎಂಎಲ್ ಮತ್ತು ಬಿಯರ್

ಐಎಂಎಲ್ ಮತ್ತು ಬಿಯರ್ ಮೇಲೆ ಶೇ. 5-10ರವರೆಗೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲು ಸರಕಾರ ತೀರ್ಮಾನಿಸಿದೆ. ಇದರಿಂದ, ಬಿಯರ್ ಬೆಲೆ ಬಾಟಲ್ ವೊಂದಕ್ಕೆ ಕನಿಷ್ಠ ಐದರಿಂದ ಹತ್ತು ರೂಪಾಯಿವರೆಗೆ ಏರಿಕೆಯಾಗಲಿದೆ. ಇನ್ನು, ವಿಸ್ಕಿ, ರಮ್ ಮುಂತಾದುವಗಳಿಗೆ ಐದರಿಂದ ಎಂಟು ರೂಪಾಯಿವರೆಗೆ ಬಜೆಟ್ ನಂತರ ಬೆಲೆ ಹೆಚ್ಚಾಗಲಿದೆ. ಕಳೆದ ಬಜೆಟ್ ನಲ್ಲೂ ಶೇ. ಆರು ಹೆಚ್ಚುವರಿ ಟ್ಯಾಕ್ಸ್ ಜಡಾಯಿಸಲಾಗಿತ್ತು.
ಈ ಬಾರಿಯ ಕೇಂದ್ರ ಬಜೆಟ್

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಭಾರೀ ಎನ್ನಬಹುದಾದ ಮದ್ಯ ಉತ್ಪನ್ನಗಳ ಮೇಲೆ ಶೇ.100 ಸೆಸ್ ವಿಧಿಸಲಾಗಿತ್ತು. ಚಿನ್ನ, ಬೆಳ್ಳಿ, ಸೇಬು ಸೇರಿದಂತೆ ಹಲವು ವಸ್ತುಗಳ ಮೇಲೆ ಸೆಸ್ ಹೇರಲಾಗಿದ್ದು, ಇದರಲ್ಲಿ ಗರಿಷ್ಠ ಸೆಸ್ ಮದ್ಯ ಉತ್ಪನ್ನಗಳ ಮೇಲೆ ಬಿದ್ದಿದೆ. ಈಗ, ಮತ್ತೆ ರಾಜ್ಯ ಸರಕಾರ ಸುಂಕ ವಿಧಿಸಲು ಸಿದ್ದತೆಯನ್ನು ನಡೆಸಿದೆ.
ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಉತ್ಪನ್ನಗಳ ಮೇಲಿನ ತೆರಿಗೆ

ಕಳೆದ ಮೇ ತಿಂಗಳಲ್ಲಿ ಕರ್ನಾಟಕ ಸರಕಾರ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ. 17-25ರವರೆಗೆ ಹೆಚ್ಚಿಸಿತ್ತು. ಹೆಚ್ಚುವರಿ ಮೂರು ಸಾವಿರ ಕೋಟಿ ಆದಾಯ ಸರಕಾರದ ಬೊಕ್ಕಸಕ್ಕೆ ಹರಿದು ಬಂದಿತ್ತು.
Laxmi News 24×7