ಬೆಂಗಳೂರು: ಈ ವರ್ಷದ ಬೇಸಗೆ ರಜೆಯನ್ನು ಮೊಟಕುಗೊಳಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದರು.
2020ರಲ್ಲಿ ಬೇಸಗೆ ರಜೆಯನ್ನು ಕೋವಿಡ್-19ನಿಂದಾಗಿ ಮುಂದೂಡಲಾಯಿತು. ಇದರಿಂದ ಶೈಕ್ಷಣಿಕ ವರ್ಷದ ಮೇಲೆ ತುಂಬಾ ಪರಿಣಾಮ ಬೀರಿದೆ. ಶಾಲೆಗಳು ದೀರ್ಘ ಅವಧಿಯಿಂದ ಮುಚ್ಚಲ್ಪಟ್ಟಿದೆ. ಇದರಿಂದಾಗಿ ಬೇಸಗೆ ರಜೆ ಮೊಟಕುಗೊಳಿಸಲು ನಿರ್ಧರಿಸಿದ್ದೇವೆ ಎಂದರು.
ಶಾಲೆ ಮುಚ್ಚಿರುವುದರಿಂದ ತುಂಬಾ ಸಮಸ್ಯೆಗಳು ಎದುರಾಗಿದೆ ಮತ್ತು ಆದಷ್ಟು ಬೇಗ ತರಗತಿಗಳನ್ನು ತೆರೆಯುವ ಅಗತ್ಯವಿದೆ ಎಂದು ಅವರು ಹೇಳಿದರು.
Laxmi News 24×7