Breaking News

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ.

Spread the love

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ. ಈ ರೀತಿ ಸುಳ್ಳು ಹೇಳಿ ಜನರೆದುರು ಬೆತ್ತಲೆ ಆಗೋದನ್ನು ತಪ್ಪಿಸಲು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಉಸ್ತುವಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆಯ ಬಗ್ಗೆ ತರಬೇತಿ ಕೊಡುವುದು ಒಳ್ಳೆಯದು.

ನಮ್ಮ ಸರ್ಕಾರದ ಕೊನೆ ವರ್ಷ(2017-18) ಪಡೆದಿದ್ದ ಸಾಲ ಕೇವಲ ರೂ.35,000 ಕೋಟಿ. 2020-21ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಲ ರೂ.90,000 ಕೋಟಿ, ಅಂದರೆ 157% ಹೆಚ್ಚಳ. ಇದಕ್ಕೆ ಮುಖ್ಯ ಕಾರಣ ತೆರಿಗೆ ಪಾಲು ಮತ್ತು ಅನುದಾನದ ಮೊತ್ತದಲ್ಲಿ ಪ್ರಧಾನಿಗಳು ಮಾಡಿರುವ ಅನ್ಯಾಯ.

‘ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ’ (FRBM)ಗೆ ಬದ್ದವಾಗಿಯೇ ನಾನು ಆರು ಬಜೆಟ್ ಮಂಡಿಸಿದ್ದೆ. ಈ ಎಲ್ಲ ಬಜೆಟ್ ಗಳಲ್ಲಿ ಹಣಕಾಸು ಕೊರತೆ ಜಿಎಸ್ ಡಿಪಿಯ ಶೇಕಡಾ ಮೂರರ ಮಿತಿಯಲ್ಲಿತ್ತು. ಒಟ್ಟು ಸಾಲ ಎಫ್ ಆರ್ ಬಿ ಎಂ ಕಾಯ್ದೆಗೆ ಅನುಗುಣವಾಗಿ ಜಿ.ಎಸ್.ಡಿ.ಪಿ ಯ ಶೇಕಡಾ 25ರ ಮಿತಿಯಲ್ಲಿತ್ತು.

ಬಿಜೆಪಿ ಆಡಳಿತದಲ್ಲಿ ಒಟ್ಟು ಸಾಲ ಜಿಎಸ್ ಡಿಪಿಯ ಶೇಕಡಾ 33ರಷ್ಟಾಗಿದೆ. ಇದು FRBM ಕಾಯ್ದೆಯ ಉಲ್ಲಂಘಣೆ. ಇದರ ಜೊತೆಗೆ ಹಣಕಾಸು ಕೊರತೆ ಶೇಕಡಾ ಮೂರರಿಂದ ಐದಕ್ಕೇರಿದೆ. ಇದು ಆತಂಕಕಾರಿ ಬೆಳವಣಿಗೆ.
ಮೊದಲು‌ ಈ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಿ,‌
ಆ‌ ಮೇಲೆ ನಮ್ಮ ಸರ್ಕಾರದ ತಪ್ಪು ಹುಡುಕಲು ಹೊರಡಿ


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ