ಬಾಗಲಕೋಟೆ: ನಗರದ ಬಸವೇಶ್ವರ ವೃತ್ತದಲ್ಲಿ ರೈತರೊಬ್ಬರು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಮಾರು ಎರಡೂವರೆ ಗಂಟೆ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಗಳೊಳ್ಳಿ ಗ್ರಾಮದ ರೈತ ಬಿ.ಎಸ್.ಬಜನ್ನವರ್ ಎಂಬುವವರು ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದ್ದಾರೆ. ಇಂದು ದೇಶಾದ್ಯಂತ ಹಮ್ಮಿಕೊಂಡಿರುವ ಹೆದ್ದಾರಿ ಬಂದ್ಗೆ ಬೆಂಬಲ ಸೂಚಿಸಿ ರೈತ ಈ ರೀತಿ ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾ ನಿರತ ರೈತ ಒತ್ತಾಯಿಸಿದ್ದಾರೆ.
Laxmi News 24×7