Breaking News

ಎಸ್ಪಿ ಹೆಸರಿನಲ್ಲಿ ಪಿಎಸ್‌ಐಗೆ ಪಂಗನಾಮ

Spread the love

ಕಲಬುರ್ಗಿ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನಗೆ ತುಂಬಾ ಪರಿಚಯ. ಅವರ ಮತ್ತೊಂದು ಪರ್ಸನಲ್ ನಂಬರ್ ಇದು. ಹಾಗೇ ಹೀಗೆ ಅಂತ ಪಿಎಸ್‌ಐ ಒಬ್ಬರೊಂದಿಗೆ ಮತನಾಡಿದಂತ ಚಾಲಾಕಿಯೊಬ್ಬರು, ಬರೋಬ್ಬರಿ ಪೀಕಿದ್ದು ಮಾತ್ರ 8.5 ಲಕ್ಷ ಹಣ. ಕೊನೆಗೆ ಅನುಮಾನಗೊಂಡಂತ ಪಿಎಸ್‌ಐ ನೇರವಾಗಿ ಎಸ್ಪಿ ಜೊತೆಗೆ ಮಾತನಾಡಿದಾಗ ಗೊತ್ತಾಗಿದ್ದೇ ಯಾಮಾರಿಸಿದವನ ನಿಜವಾದ ಬಣ್ಣ. ಹೀಗೆ ಪಂಗನಾಮ ಹಾಕಿದ ಆಸಾಮಿ ಅಂದರ್ ಕೂಡ ಆಗಿದ್ದಾನೆ.ಹೌದು.. ಪಿಎಸ್‌ಐ ಒಬ್ಬರಿಗೆ ಎಸ್ಪಿ ಹೆಸರಿನಲ್ಲಿ ವಂಚಿಸಿರುವಂತ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ಠಾಣೆಯ ಪಿಎಸ್‌ಐ ಮಂಜುನಾಥ್ ಗೆ ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಎಂಬಾತ ತಾನು ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಆತ್ಮೀಯ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ. ನಂಬರ್ ಸೇವ್ ಮಾಡಿಕೊಂಡು ವಾಟ್ಸ್ ಆಪ್ ನಲ್ಲಿ ಡಿಪಿ ನೋಡಿದಾಗ ಎಸ್ಪಿ ಪೋಟೋ ಇದ್ದಿದ್ದರಿಂದ ನಿಜವೆಂದು ಕೂಡ ನಂಬಿದ್ದಾನೆ.

ಇದೇ ಕಾರಣದಿಂದಾಗಿ ಆತನೊಂದಿಗೆ ಚಾಟ್ ಕೂಡ ಮಾಡಿರುವಂತ ಪಿಎಸ್‌ಐ ಮಂಜುನಾಥ್ ನಿಂದ ಬೇರೆ ಬೆರೆ ಕಾರಣ ಹೇಳಿ ಖಾಸಿಂ ಪಟೇಲ್, ಹಂತ ಹಂತವಾಗಿ 8.5 ಲಕ್ಷ ಹಣವನ್ನು ಪಡೆದಿದ್ದಾನೆ. ಹೀಗೆ ಹಣಪಡೆದ ನಂತ್ರ ಮತ್ತೆ ಮತ್ತೆ ಹಣಕ್ಕೂ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಅನುಮಾನಗೊಂಡ ಪಿಎಸ್‌ಐ ಮಂಜುನಾಥ್, ಫೆಬ್ರವರಿ 4ರಂದು ಎಸ್ಪಿ ಭೇಟಿ ಮಾಡಿ ಹಣ ನೀಡಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಜೊತೆ ಸಚಿವರ ಸಂಧಾನ ಸಭೆ ವಿಫಲ: ಮಿನಿಸ್ಟರ್​​ ಕಾರಿಗೆ ರೈತರ ಮುತ್ತಿಗೆ

Spread the loveಚಿಕ್ಕೋಡಿ, ಬೆಳಗಾವಿ: ಕಳೆದ ಏಳು ದಿನಗಳಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟ ಕೊನೆಗೊಳಿಸಲು ಸರ್ಕಾರದ ಪರವಾಗಿ ಕಾನೂನು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ