Breaking News

ಚಿನ್ನದ ಬೆಲೆಯಲ್ಲಿ ಇಳಿಕೆ

Spread the love

2021ರ ಬಜೆಟ್ ನ ನಂತರ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವ ಘೋಷಣೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂದೂ ಇಳಿದಿದ್ದು, 322 ರೂಪಾಯಿಗೆ ತಲುಪಿದೆ.

ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 47,457 ರೂಪಾಯಿಯಾಗಿತ್ತು. ಇಂದು 322 ರೂಪಾಯಿ ಇಳಿಕೆಯೊಂದಿಗೆ ಬಂಗಾರದ ಬೆಲೆ 47,137 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,825 ಡಾಲರ್ ಪ್ರತಿ ಔನ್ಸ್ ಆಗಿದೆ.

ಹಾಗೆಯೇ ಬೆಳ್ಳಿಯ ಬೆಲೆಯನ್ನು ಇಳಿಕೆ ಕಂಡಿದ್ದು, ಗುರುವಾರ ಬೆಳ್ಳಿ ಬೆಲೆ 972 ರೂಪಾಯಿ ಇಳಿಕೆ ಆಗಿತ್ತು ಹಾಗೂ ಕೆ.ಜಿ ಬೆಳ್ಳಿ ಬೆಲೆ 67,170 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ.


Spread the love

About Laxminews 24x7

Check Also

ಕೋರ್ಟ್‌, ಏರ್‌ಪೋರ್ಟ್‌ಗೆ 1,100 ಹುಸಿ ಬಾಂಬ್ ಬೆದರಿಕೆ – ಮೈಸೂರಲ್ಲಿ ಆರೋಪಿ ಅರೆಸ್ಟ್‌

Spread the loveಮೈಸೂರು: ದೇಶದ ನಾನಾ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಇಮೇಲ್ ರವಾನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು  ಮೈಸೂರಿನಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ