ನವದೆಹಲಿ: ಕೇರಳ ಹೈಕೋರ್ಟ್ ತೀರ್ಪನ್ನ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, AICTE ನಿಯಮಾವಳಿಗಳ ಪ್ರಕಾರ, 5.3.2010ರ ನಂತರ ತಾಂತ್ರಿಕ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಎಚ್ ಡಿ ಕಡ್ಡಾಯ ಎಂದಿದೆ.
ಪಿಹೆಚ್ ಡಿ ಪದವಿಯ ಕೊರತೆಗೆ ಸಂಬಂಧಿಸಿದಂತೆ ಸಹಾಯಕ ಪ್ರಾಧ್ಯಾಪಕರು ಸಲ್ಲಿಸಿದ್ದ ಹನ್ನೆರಡು ಅರ್ಜಿಗಳನ್ನ ವಿಲೇವಾರಿ ಮಾಡಿದ ಸುಪ್ರಿಂಕೋರ್ಟ್, ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ವಿಶೇಷ ಅರ್ಜಿಗಳನ್ನ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ.
‘18.02.2003ರ ಅಧಿಸೂಚನೆಯು ಪಿಎಚ್ ಡಿಯನ್ನ ಪಡೆಯಲು ಏಳು ವರ್ಷಗಳ ಕಾಲ ಅವಕಾಶ ನೀಡಿ, ಅಸೋಸಿಯೇಟ್ ಪ್ರೊಫೆಸರ್ʼಗಳ (ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮರುನಾಮಕರಣ) ಪದವಿಯನ್ನ 2010ರಲ್ಲಿ ಕೊನೆಗೊಳಿಸಲಿದೆ ಮತ್ತು ಆ ಪ್ರಕಾರ, ಪಿಎಚ್ ಡಿ ಪದವಿಯನ್ನು ಪಡೆದವರು ಪಿಎಚ್ ಡಿ ಪದವಿಯನ್ನ ಪಡೆದ ದಿನಾಂಕದಿಂದ ಪರಿಗಣನೆಗೆ ಅರ್ಹರಾಗಿರುತ್ತಾರೆ ಎಂದರು.