ಬೆಂಗಳೂರು: ಈ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸಿನಿಮಾದ ಬಸ್ʼನಂತಿದೆ. ರಸ್ತೆಯಲ್ಲೇ ಡಕೋಟಾ ಬಸ್ ರೀತಿ ಕೆಟ್ಟು ಹೋಗಿದೆ. ಗೇರ್ ಹಾಕೋಕೆ ಆಗೋದಿಲ್ಲ, ಹಾಕಿದ್ರು ಗೇರ್ ಕಿತ್ತಿಕೊಂಡು ಬರುತ್ತೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ‘ ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದ ಸುಳ್ಳುಗಳನ್ನ ಹೇಳಿಸಿದೆ. ಭಾಷಣದಲ್ಲಿ ಒಂಚೂರು ಸತ್ಯವಿಲ್ಲ. ಇದಕ್ಕೆ ಮುಂದಾಲೋಚನೆ ಇಲ್ಲ, ದೂರದೃಷ್ಟಿಯೂ ಇಲ್ಲ. ಭಾಷಣದಲ್ಲಿ ಯಾವುದೇ ಸತ್ವವಿಲ್ಲ. ನಮ್ಮ ಯೋಜನೆಗಳನ್ನೇ ಭಾಷಣದಲ್ಲಿ ಪ್ರಸ್ತಾಪ ಮಾಡಿ ನಮ್ಮ ಸಾಧನೆಯನ್ನೇ ಅವರು ಹೇಳಿಕೊಂಡಿದ್ದಾರೆ. ಇದು ಚುನಾಯಿತ ಸರ್ಕಾರ ಮಾಡುವ ಕೆಲಸವಲ್ಲ’ ಎಂದರು.
 Laxmi News 24×7
Laxmi News 24×7
				 
		 
						
					