– ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಯಾಗುತ್ತಿದ್ದಂತೆ ಮಂಡ್ಯ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗದರಿವೆ. ಜತೆಗೆ ಪಂಚಾಯಿತಿ ಗಾದಿಯ ಆಕಾಂಕ್ಷಿತರು ತಮ್ಮ ನಾಯಕರ ಮನೆಯಲ್ಲಿ ಸರ್ಕಸ್ ನಡೆಸುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ತಾಪಂ ಮತ್ತು ಜಿಪಂ ಚುನಾವಣೆಯೂ ಎದುರಾಗಲಿದೆ. ಹೀಗಾಗಿ ಈ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮೂರು ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರು, ಜಿಪಂ ಸದಸ್ಯರಿಗೆ ಪ್ರತಿಷ್ಠೆಯ ಸಂಕೇತವಾಗಿದ್ದು, ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆಯ ಪಣವಾಗಿದೆ.ಜಿಲ್ಲೆಯಲ್ಲಿ 233 ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನದಲ್ಲಿ ಮಹಿಳೆ ಮೀಸಲಾತಿ ಯಂತೆ 118 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಬೇಕೆಂದು ರಾಜ್ಯ ಸರ್ಕಾರದ ಪತ್ರದಲ್ಲಿ ತಿಳಿಸಲಾಗಿದೆ. ಉಳಿದ 115 ಸ್ಥಾನಗಳು ಪುರಷರಿಗೆ ಮೀಸಲಾಗಿವೆ. ಗ್ರಾಪಂ ಫಲಿತಾಂಶ ಘೋಷಣೆಯಾದಂದಿ ನಿಂದ ಗೆದ್ದವರಲ್ಲಿ ಇವ ನಮ್ಮವ ಇವ ನಮ್ಮವ ಎಂದು ರಾಜ
ಸದಸ್ಯರು ಕೂಡ ಜೆಡಿಎಸ್, ಕಾಂಗ್ರೆಸ್ ಎರಡು ಪಕ್ಷದಲ್ಲಿಯೂ ನಾಯಕರೊಂದಿಗೆ ಪ್ರತ್ಯೇಕವಾಗಿ ಫೋಟ್ನೋ ತೆಗೆಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಗೆದ್ದವರೆಲ್ಲ ನಮ್ಮ ಪಕ್ಷದ ಮುಖಂಡರು ಎಂದು ನಾಯಕರು ಸನ್ಮಾನಿಸಿ ಗೌರವಿಸಿದ್ದಾರೆ. ಇನ್ನೊಂದು ಕಡೆ ಫೆ.8, 9 ಮತ್ತು 10ರಂದು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಿಗದಿ ಮಾಡಲಾಗಿದೆ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಿಗದಿಯಾಗುತ್ತಿದ್ದಂತೆ ಸದಸ್ಯರನ್ನು ತಮ್ಮ ಬಳಿ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಇದರ ಜತೆಗೆ ಪ್ರವಾಸಕ್ಕೆ ಕರೆದೊಯ್ಯವ ಪ್ರಯತ್ನಗಳು ನಡೆಯುತ್ತಿವೆ. ಇನ್ನೊಂದು ಕಡೆ ಆಕಾಂಕ್ಷಿತರಲ್ಲದ ಸದಸ್ಯರಿಗೆ ಇದೀಗ ಡಿಮ್ಯಾಂಡ್ ಶುರುವಾಗಿದೆ. ತಮ್ಮ ಗುಂಪಿನಲ್ಲಿದ್ದು ತಾವು ಅಧಿಕಾರ ಕ್ಕೇರಲು ಮತ ನೀಡಬೇಕೆಂದು ಸದಸ್ಯರಿಗೆ ಹಣ, ಗುತ್ತಿಗೆ ಕಾಮಗಾರಿ ಕೊಡಿಸುವ ಆಮಿಷ ನೀಡಲಾಗುತ್ತಿದೆ.
Laxmi News 24×7