Breaking News

ಕೇಂದ್ರ ಬಜೆಟ್ 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?

Spread the love

ನವದೆಹಲಿ, ಫೆಬ್ರುವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಹಲವು ಕ್ಷೇತ್ರಗಳಿಗೆ ಅನುದಾನಗಳನ್ನು ಘೋಷಿಸಿದ್ದಾರೆ.

2020ರಲ್ಲಿ ಕೊರೊನಾ ಸೋಲಿಸಲು 27.1 ಲಕ್ಷ ಕೋಟಿ ಮಿನಿ ಬಜೆಟ್

ಮೋದಿ ಸರ್ಕಾರದ ಈ ಒಂಬತ್ತನೇ ಬಜೆಟ್ ನಲ್ಲಿ ಈ ಬಾರಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದ ವರ್ಷದಿಂದಲೂ ಜನರ ಆರ್ಥಿಕ ಸ್ಥಿತಿಗತಿ ಕುಂಠಿತವಾಗಿದ್ದು, ಈ ಬಾರಿ ಸಾಮಾನ್ಯ ಜನರಿಗೆ ಬಜೆಟ್ ಯಾವ ರೀತಿ ನೆರವಾಗಲಿದೆ ಎಂಬ ಬಗ್ಗೆ ಕುತೂಹಲ ಉಂಟಾಗಿತ್ತು.

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸಾಮಾನ್ಯ ಜನರಿಗೆ ಏನು ಕೊಡುಗೆ ನೀಡಿದ್ದಾರೆ? ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಯಾವುದರ ಬೆಲೆ ಏರಿಕೆಯಾಗಲಿದೆ, ಯಾವ ವಸ್ತುವಿನ ಬೆಲೆ ಇಳಿಕೆಯಾಗಿದೆ? ಇಲ್ಲಿದೆ ವಿವರ…

ದುಬಾರಿಯಾಗಿರುವುದು ಯಾವುದು?

* ಪೆಟ್ರೋಲ್, ಡೀಸೆಲ್
* ಕಾಬೂಲ್ ಕಡಲೆ, ಸೇಬು
* ಮದ್ಯ (ಶೇ.100ರಷ್ಟು ಕೃಷಿ ಸೆಸ್)
* ಕಲ್ಲಿದ್ದಲು, ಲಿಗೈಟ್, ಪೀಟ್
* ಬಟಾಣಿ (ಶೇ.40 ಕೃಷಿ ಸಸ್)
* ವಾಹನ ಬಿಡಿಭಾಗಗಳು
* ಹುರಿಗಡಲೆ, ಹತ್ತಿ, ಸೂರ್ಯಕಾಂತಿ (ಹುರಿಗಡಲೆ ಮೇಲೆ ಶೇ.50ರಷ್ಟು ಸೆಸ್)
* ಸೇಬು ಹಣ್ಣು (ಶೇ.35 ಕೃಷಿ ಸೆಸ್)
* ವಿದೇಶಿ ಮೊಬೈಲ್
* ಅಡುಗೆ ಎಣ್ಣೆ (ಶೇ.20 ಸೆಸ್)
* ವಿದ್ಯುತ್ ಸಾಮಗ್ರಿಗಳು, ಮೊಬೈಲ್, ಚಾರ್ಜರ್
*ರಸಗೊಬ್ಬರ
* ಲೆದರ್ ಶೂ
* ಮೀನಿನ ಆಹಾರದ ಮೇಲೆ ಕಸ್ಟಮ್ ಸುಂಕ ಶೇ.5ರಿಂದ 15ರ ವರೆಗೆ ಏರಿಕೆ

ಯಾವ ವಸ್ತುಗಳ ಬೆಲೆ

* ದೇಶಿ ಪಾದರಕ್ಷೆ
* ಲೋಹ, ಕಬ್ಬಿಣ
* ಚಿನ್ನ, ಬೆಳ್ಳಿ
* ನೈಲಾನ್ ಬಟ್ಟೆಗಳು, ತಾಮ್ರದ ಸಾಮಗ್ರಿಗಳು
* ವಿಮೆಗಳು
* ಶೂ
* ಡ್ರೈ ಕ್ಲೀನಿಂಗ್
* ಕೃಷಿ ಸಾಮಗ್ರಿಗಳು

ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್

ಕೇಂದ್ರ ಬಜೆಟ್ ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಸೆಸ್ ವಿಧಿಸಲಾಗಿದೆ. ಪೆಟ್ರೋಲ್ ಮೇಲೆ ಲೀಟರಿಗೆ 2.5 ರೂ ಹಾಗೂ ಡೀಸೆಲ್ ಗೆ 4 ರೂ ಸೆಸ್ ವಿಧಿಸಲಾಗಿದೆ. ಕೆಲವು ಸರಕುಗಳ ಮೇಲೆ ಮೂಲಸೌಕರ್ಯ ಅಭಿವೃದ್ಧಿ ಸೆಸ್ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಉಜ್ವಲ ಯೋಜನೆ ವಿಸ್ತರಣೆ

ಬಜೆಟ್ ನಲ್ಲಿ ಉಚಿತ ಅನಿಲ ಗ್ಯಾಸ್ ವಿತರಣೆ ಕುರಿತು ಹೇಳಿಕೆ ನೀಡಿದ್ದು, ದೇಶದಲ್ಲಿ 8 ಕೋಟಿಗೂ ಹೆಚ್ಚು ಮಹಿಳೆಯರು ಉಜ್ವಲ ಯೋಜನೆಯಡಿ ಅನಿಲ ಗ್ಯಾಸ್ ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಮತ್ತೆ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲ ಯೋಜನೆ ವಿಸ್ತರಿಸಲಾಗುವುದು ಎಂದು ತಿಳಿಸಿದರು. ನಗರ ಅನಿಲ ವಿತರಣೆಗೆ ಮುಂದಿನ 3 ವರ್ಷಗಳಲ್ಲಿ ಇನ್ನೂ 100 ಜಿಲ್ಲೆಗಳನ್ನು ಸೇರಿಸಲಾಗುವುದು ಎಂದರು.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ