Breaking News

ದರ್ಶನ್ ನಟನೆಯ ರಾಬರ್ಟ್ ಸಿನಿಮಾಕ್ಕೆ ಸಂ’ಕಷ್ಟ” :ಈ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ..?

Spread the love

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಿಡುಗಡೆಗೆ ತೆಲುಗು ಚಿತ್ರರಂಗದಿಂದ ಅಡ್ಡಿ ಎದುರಾದ ಕಾರಣ, ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂ’ರು ನೀಡಿದ್ದಾರೆ. ಅಂದಹಾಗೆ, ಕೊರೋನಾದ ಹಾವಳಿಯಿಂದಾಗಿ 2020ರಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳೆಲ್ಲವೂ ಮುಂದಕ್ಕೆ ಹೋಗಿತ್ತು. ಎಲ್ಲವೂ ಸರಿಯಾಗಿದ್ದರೆ ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ತೆರೆ ಕಾಣಬೇಕಿತ್ತು.

ಆದರೆ ಕೊರೋನಾ ಹಾವಳಿ ಎಲ್ಲರೂ ಹಾಕಿಕೊಂಡಿದ್ದ ಪ್ಲಾನ್‍ನ್ನು ಬುಡಮೇಲು ಮಾಡಿತ್ತು. ಆದರೆ ಇದೀಗ ಮಾರ್ಚ್ 11 ರಂದು ಬಿಡುಗಡೆಯಾಗಲಿರುವ ರಾಬರ್ಟ್ ಸಿನಿಮಾಕ್ಕೆ ಸಂ’ಕ’ಷ್ಟ ಎದುರಾಗಿದೆ. ಹೌದು ರಾಬರ್ಟ್ ಸಿನಿಮಾದ ಬಿಡುಗಡೆಗೆ ಅ’ಡ್ಡಿ ಎದು’ರಾದ ಬಗ್ಗೆ ಇಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ ನಟ ಕಿಚ್ಚ ಸುದೀಪ್. ‘ನಾನು ಇನ್ನೊಂದು ಸಿನಿಮಾವನ್ನು ಹ್ಯಾಂಡಲ್ ಮಾಡುವಷ್ಟು ದೊಡ್ಡ ಕಲಾವಿದ ಅಲ್ಲ’ ಎಂದು ಹೇಳಿದ್ದಾರೆ. ನನ್ನ ಸಿನಿಮಾಕ್ಕೆ ಏನಾದರೂ ಸಮಸ್ಯೆಯಾದರೆ ನಾನು ನನ್ನ ಸಿನಿಮಾ ಕಾಪಾಡಿಕೊಳ್ಳುತ್ತೇನೆ.

ಅಂತೆಯೇ ಅವರವರ ಸಿನಿಮಾಗಳನ್ನು ಕಾಪಾಡಿಕೊಳ್ಳುವ ಶಕ್ತಿ ದೇವರು ಎಲ್ಲರಿಗೂ ಕೊಟ್ಟಿರುತ್ತಾನೆ. ಅದರ ಬಗ್ಗೆ ನಾನು ಏನು ಹೇಳಲಿ’ ಎನ್ನುವ ಮೂಲಕ ಮಾತು ಮುಗಿಸಿದರು ಕಿಚ್ಚ ಸುದೀಪ್. ಹೌದು ಅಂದಹಾಗೆ, ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಬಿಡುಗಡೆಯಾಗಲಿದ್ದು, ಅದೇ ದಿನದಂದು ತೆಲುಗಿನ ಮೂರು ಸಿನಿಮಾಗಳು ತೆರೆ ಕಾಣಲಿದೆ. ಈ ಕಾರಣದಿಂದಾಗಿ ಆ ದಿನದಂದು ರಾಬರ್ಟ್ ಸಿನಿಮಾದ ಬಿಡುಗಡೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ತೆಲುಗು ಚಿತ್ರರಂಗ ಹೇಳಿತ್ತು.

ಈ ಕುರಿತಾಗಿ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ದೂರು ನೀಡಿದ್ದರು. ಅಂದಹಾಗೆ, ಈಗ ಈ ಸಮಸ್ಯೆಯೂ ಬಗೆಹರಿದಿದೆ. ರಾಬರ್ಟ್ ಸಿನಿಮಾದ ತೆಲುಗು ಅವತರಣಿಕೆಯು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಇನ್ನು ಆಶಾ ಭಟ್ ನಾಯಕಿಯಾಗಿ ನಟಿಸಿರುವ ರಾಬರ್ಟ್ ಸಿನಿಮಾದಲ್ಲಿ ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ರವಿ ಕಿಶನ್ , ಚಿಕ್ಕಣ್ಣ, ಶಿವರಾಜ್ ಕೆ. ಆರ್ ಪೇಟೆ, ಐಶ್ಚರ್ಯ ಪ್ರಸಾದ್ ಮತ್ತಿತ್ತರು ನಟಿಸಿದ್ದಾರೆ.

ಅಂದಹಾಗೆ, ನಟ ಸುದೀಪ್ ಹಾಗೂ ದರ್ಶನ್ ಈ ಹಿಂದೆ ಉತ್ತಮ ಗೆಳೆಯರಾಗಿದ್ದರು. ಈಗ ಪರಸ್ಪರ ದೂರವಾಗಿದ್ದಾರೆ. ಆದರೆ ಇವತ್ತಿಗೂ ಇಬ್ಬರಿಗೂ ಸಂದರ್ಶನದ ಸಮಯದಲ್ಲಿ ಪರಸ್ಪರದ ಬಗ್ಗೆ ಪ್ರಶ್ನೆಗಳು ಎದುರಾಗುತ್ತದೆ. ಆದರೆ ಇಬ್ಬರೂ ಸಹ ವಿ’ವಾದಕ್ಕೆ ಆಸ್ಪದ ಕೊಡದೇ ಉತ್ತರ ನೀಡಿ ಮುಂದೆ ಸಾಗುತ್ತಾರೆ. ನಟ ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 25 ವರ್ಷವಾಗಿದೆ. ಈ ಶುಭ ಸಂದರ್ಭವನ್ನು ದುಬೈನ ಬುರ್ಜ್ ಖಲೀಫಾನಲ್ಲಿ ಆಚರಿಸಲಾಗುತ್ತಿದೆ. ಅಲ್ಲಿಯೇ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.


Spread the love

About Laxminews 24x7

Check Also

ನವೆಂಬರ್ ಕ್ರಾಂತಿ ಮಾಡಲು ಹೈಕಮಾಂಡ್ ಬಿಡಲ್ಲ: ಸಚಿವ ಸತೀಶ್ ಜಾರಕಿಹೊಳಿ

Spread the love ಬೆಂಗಳೂರು: ನವೆಂಬರ್ ಕ್ರಾಂತಿ ಎಲ್ಲ ಆಗಲ್ಲ. ಕ್ರಾಂತಿ ಆಗಲು ಹೈಕಮಾಂಡ್ ಬಿಡಬೇಕಲ್ವಾ?. ಹೈಕಮಾಂಡ್ ಹಾಗೆಲ್ಲ ಮಾಡೋಕೆ ಬಿಡಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ