Breaking News

ಗೋಕಾಕ ನಗರದ ವಾರ್ಡ್ ಗಳಲ್ಲಿ  ಸದಸ್ಯರೊಂದಿಗೆ ಕೊರೊನಾ ವಾರಿಯರ್ಸ್ ಗಳು ಜಾಗೃತಿ ಮೂಡಿಸಿದರು.

Spread the love

ಗೋಕಾಕ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ  ಹಿನ್ನೆಲೆಯಲ್ಲಿ ಗೋಕಾಕ ನಗರದ ವಾರ್ಡ್ ಗಳಲ್ಲಿ  ಸದಸ್ಯರೊಂದಿಗೆ ಕೊರೊನಾ ವಾರಿಯರ್ಸ್ ಗಳು ಜಾಗೃತಿ ಮೂಡಿಸಿದರು.

ನಗರಸಭೆ ಕಂದಾಯ ಅಧಿಕಾರಿ ಎಸ್. ಕೆ. ಹಳ್ಳೂರು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿಗಳು  ನಗರದ ಪ್ರತಿಯೊಂದು  ವಾರ್ಡ್ ಗೆ ಸದಸ್ಯರೊಂದಿಗೆ  ಭೇಟಿ ನೀಡಿ ಜನರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿ ಆರೋಗ್ಯ ರಕ್ಷಣೆ  ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಜತೆಗೆ ಕಡ್ಡಾಯವಾಗಿ ಮಾಸ್ಕ ಧರಿಸುವ ಬಗ್ಗೆ ತಿಳಿ ಹೇಳಲಾಯಿತು. ಅನಗತ್ಯವಾಗಿ ಹೊರ ಓಡಾಡದೆ ಲಾಕ್ ಡೌನ್ ಬೆಂಬಲ ನೀಡುವಂತೆ ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರಾದ  ಅಶ್ವಿನಿ ಲುಕ್  ಮುಖಂಡರಾದ ಮಹದೇವಪ್ಪ ಹೊಸಪೇಟ, ದಿಲೀಪ್ ಧುಮಾಳ, ಬಸವರಾಜ್ ದೇಶನೂರ,  ದೇವಾನಂದ್ ಕಂಬಾರ್,  ಸುರೇಶ್ ಜೋರಾಪುರ,  ಪ್ರವೀಣ್ ಚುನಮರಿ,  ಗುರು ಕಂಬಾರ್,  ಉದಯ ಕೊಳಕಿ ಮುಂತಾದವರು ಇದ್ದರು.


Spread the love

About Laxminews 24x7

Check Also

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ