ಮಂಗಳೂರು: ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ನಡೆದಿದೆ.

ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿಗೆ ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ಮಲಗಿದಲ್ಲೇ ಮಲಗಿರುವ ಅಪ್ಪಿ ಶೆಟ್ಟಿಯವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ.ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ ಮೊಮ್ಮಗ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಅನಾರೋಗ್ಯದಿಂದ ಇರುವ ಅಪ್ಪಿಶೆಟ್ಟಿ ಕಳೆದ ಕೆಲ ವರ್ಷದಿಂದ ಮಲಗಿದಲ್ಲೇ ಇದ್ದಾರೆ. ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದು, ಇದರಿಂದ ನೊಂದ ಅಸಹಾಯಕ ಮೊಮ್ಮಗ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಹಲ್ಲೆ ನಡೆಸಿದ ಈ ಇಬ್ಬರ ಮೇಲೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.

Laxmi News 24×7