ಬೆಂಗಳೂರು : ಬಹುತೇಕರು ಸಂಜೆ ಆದ್ರೆ ಸಾಕು, ಫಾಸ್ಟ್ ಫುಡ್ ತಿನಿಸುಗಳ ಮೊರೆ ಹೋಗುತ್ತಾರೆ. ಬಾಯಿ ಚಪ್ಪರಿಸಿಕೊಂಡು ಗೋಭಿ, ನೂಡಲ್ಸ್ ಸೇರಿದಂತೆ ಫ್ರೈಡ್ ಪುಡ್ ತಿನ್ನುತ್ತಾರೆ. ಆದ್ರೇ.. ಇದೀಗ ಇವೇ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ, ಶ್ವಾಸಕೋಶದ ಕ್ಯಾನ್ಸರ್ ಗೂ ಕಾರಣವಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಈ ಕುರಿತಂತೆ ಕಿದ್ವಾಯಿ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಜನರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮೂಲಕ ಕ್ಯಾನ್ಸರ್ ರೋಗಕ್ಕೂ ತುತ್ತಾಗುತ್ತಿದ್ದಾರೆ. ಇದಕ್ಕೆ ಮೂಲಕ ಕಾರಣ ತರಾವರಿ ಫ್ರೈಡ್ ಮಾಡಿರೋ ರೆಸಿಪಿಗಳು ಆಗಿದ್ದಾವೆ. ಇದರಿಂದಾಗಿ ರಾಜ್ಯದಲ್ಲೂ ಕ್ಯಾನ್ಸರ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿವ ಆಘಾತಕಾರಿ ಅಂಶವನ್ನು ಬಿಚ್ಚಿಟ್ಟಿದ್ದಾರೆ.
ಸೋ ಸಿಲಿಕಾನ್ ಸಿಟಿಯ ಜನರೇ ನೀವು ಬಾಯ್ ರುಚಿಗಾಗಿ, ಅಲ್ಲಿ ಚೆನ್ನಾಗಿದೇ, ಇಲ್ಲಿ ಫಾಸ್ಟ್ ಪುಡ್ ಚೆನ್ನಾಗಿದೆ ಎಂಬುದಾಗಿ ಹುಡುಕಿಕೊಂಡು ಹೋಗಿ ಗೋಭಿ, ನೂಡಲ್ ಸೇರಿದಂತೆ ಫ್ರೈಡ್ ಪುಡ್ ತಿನ್ನೋ ಮುನ್ನಾ ಈಗಲಾದ್ರೂ ಯೋಚಿಸಿ. ನೀವು ತಿನ್ನುವ ಫಾಸ್ಟ್ ಪುಡ್, ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ, ಶ್ವಾಸಕೋಶದ ಸಮಸ್ಯೆಗಳಿಗೆ ನಿಮ್ಮನ್ನು ದೂಡುವ ಮುನ್ನ ಎಚ್ಚರಿಕೆ ವಹಿಸೋದು ಒಳಿತು.