ದಾವಣಗೆರೆ : ಪಂಚಮಸಾಲಿ ಲಿಂಗಾಯತ ಸಮುದಾಯದ ಪಾದಯಾತ್ರೆ ಬೆಂಗಳೂರು ಸೇರುವ ಮುನ್ನ 2 ಎ ಘೋಷಿಸದಿದ್ದರೆ ನಿಮ್ಮ ಕುರ್ಚಿ ಖಾಲಿಯಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಹರಿಹರದಲ್ಲಿ ಮಾತನಾಡಿದ ಯತ್ನಾಳ್, ನಮ್ಮ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ, ನಾನೇ ನಿಮಗೆ ಕೋಟಿಗಟ್ಟಲೆ ಹಣ ಕೊಡುತ್ತೇನೆ. ಮೀಸಲಾತಿ ಕೊಡುತ್ತೇನೆ ಎಂದು ಸುಮ್ಮನೆ ಯಾಕೆ ಮಾಡುತ್ತೀರಿ? ನಾನು ಮಂತ್ರಿ ಆಗಬೇಕೆಂದು ಯಾರ ಕೈ ಕಾಲು ಹಿಡಿಯುವವನಲ್ಲ. ಸಿಎಂ ಕುರ್ಚಿ ಬರುವುದಿದೆ ಎಂದು ಹೇಳಿದರು.
ನಮ್ಮ ಸಮಾಜದ ಕೆಲವರಿಗೆ ಸಣ್ಣಪುಟ್ಟ ಖಾತೆಗಳನ್ನು ನೀಡಿ ಇಂಧನ, ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ಸಿಎಂ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬದಲು, ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿಎಂಗೆ ಟಾಂಗ್ ನೀಡಿದರು.
 Laxmi News 24×7
Laxmi News 24×7
				 
		 
						
					