Breaking News

ಮಂಗಳವಾರ ರಜಾದಿನ’ ಚಿತ್ರದ ನೀನೆ ಗುರು, ನೀನೆ ಗುರಿ, ನೀನೆ ಗುರುತು ಹಾಡು ಬಿಡುಗಡೆ

Spread the love

ಬೆಂಗಳೂರು: ಕೋವಿಡ್ ಅಬ್ಬರದಿಂದ ತತ್ತರಿಸಿದ್ದ ಚಂದನವನ ಮತ್ತೆ ನಿಧಾನವಾಗಿ ತಲೆ ಎತ್ತುತ್ತಿದ್ದು, ಹಲವು ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸಿವೆ. ಈ ನಡುವೆ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ‘ಮಂಗಳವಾರ ರಜಾದಿನ’ ಸಿನಿಮಾದ ನೀನೆ ಗುರು, ನೀನೆ ಗುರಿ, ನೀನೆ ಗುರುತು ಎಂಬ ಹಾಡನ್ನು ನಟ ಅಭಿಷೇಕ್ ಅಂಬರೀಷ್ ಬಿಡುಗಡೆಗೊಳಿಸಿದ್ದು, ಇದೀಗ ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಗೌಸ್ ಫೀರ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡು ತಂದೆ- ಮಗನ ಕುರಿತಾಗಿ ಬಾಂಧವ್ಯದ ಎಳೆಯನ್ನು ಹೊಂದಿದೆ. ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಹಾಡಿಗೆ ದ್ವನಿ ನೀಡಿದ್ದು, ಈ ಸಿನಿಮಾದ ಹಾಡನ್ನು ಕೇಳಿದ ಬಳಿಕ ಪ್ರತಿಯೊಬ್ಬರಿಗೂ ತಂದೆಯ ತ್ಯಾಗ, ಪ್ರೀತಿಯು ನೆನಪಿಗೆ ಬರುತ್ತದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಮಂಗಳವಾರ ರಜಾದಿನ ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ತಯಾರಾಗಿರುವ ಈ ಸಿನಿಮಾ ಹೇರ್ ಕಟ್ಟಿಂಗ್ ಮಾಡುವ ತಂದೆ ಹಾಗೂ ಆತನ ಮಗನ ಕುರಿತಾದ ಕಥೆಯಾಗಿದ್ದು, ತಂದೆ ಮಗನ ನಡುವಿನ ಸುಂದರ ಬಾಂಧವ್ಯವನ್ನು ಅನಾವರಣಗೊಳಿಸಲು ಚಿತ್ರತಂಡ ಮುಂದಾಗಿದೆ.

ಈ ಸಿನಿಮಾ ಮುಂಬರುವ ಫೆಬ್ರವರಿ 5 ರಂದು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಯುವಿನ್ ಆಯಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ತ್ರಿವರ್ಗ ಫಿಲಂಸ್ ನಿರ್ಮಾಣ ಮಾಡಿದೆ.


Spread the love

About Laxminews 24x7

Check Also

ಮಂಗಳೂರು ಏರ್ಪೋರ್ಟ್‌ನಲ್ಲಿ ಕೆ.ಸಿ.ವೇಣುಗೋಪಾಲ್ ಎದುರು ಡಿಕೆಶಿ​ ಪರ ಘೋಷಣೆ

Spread the loveಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ