ಮಸ್ಕಿ (ರಾಯಚೂರು): ಎನ್‌ಆರ್‌ಬಿಸಿಯ 5A ಕಾಲುವೆ ಅನುಷ್ಠಾನ ಸಾಧ್ಯವಿದ್ದರೆ ಎಲ್ಲ ಪ್ರಯತ್ನಗಳಿಗೂ ನಾವು ಬದ್ಧವಿದ್ದು, ಯಾವ ದೇವರ ಮೇಲೆ ಬೇಕಾದರೂ ಪ್ರಮಾಣ ಮಾಡುವುದಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ತಿಳಿಸಿದರು.
ಯೋಜನೆ ಜಾರಿ ಬೇಡಿಕೆಯೊಂದಿಗೆ ಕಳೆದ 69 ದಿನಗಳಿಂದ ರೈತರು ಧರಣಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಯೋಜನೆ ಜಾರಿಗೆ ನಾವು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬೇಕಾದರೆ ಇನ್ನೂ ಯಾರನ್ನಾದರೂ ಭೇಟಿ ಮಾಡಬೇಕಿದ್ದರೆ ಕರೆಯಿರಿ ಬರುತ್ತೇನೆ. ಅದಕ್ಕೆ ಎಲ್ಲಿ ಬೇಕಾದರೂ ಪ್ರಮಾಣ ಮಾಡುವೆ ಎಂದರು.
ಈ ವೇಳೆ ರೈತರು ಪ್ರತಾಪಗೌಡರೊಂದಿಗೆ ವಾಗ್ವಾದಕ್ಕಿಳಿದ ಪ್ರಸಂಗವೂ ನಡೆಯಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಯೋಜನೆ ಅನುಷ್ಠಾನ ಕೂಡಲೇ ಘೋಷಿಸಬೇಕು ಎಂಬುದು ಪ್ರತಿಭಟನಾನಿರತ ರೈತರ ಪ್ರಮುಖ ಬೇಡಿಕೆಯಾಗಿದೆ.
 Laxmi News 24×7
Laxmi News 24×7
				 
		 
						
					 
						
					