ಬೆಂಗಳೂರು : ಕೇಂದ್ರ ಸರಕಾರ 18 ರಾಜ್ಯಗಳಿಗೆ 2020-21ನೇ ಸಾಲಿನ 2 ನೇ ಕಂತಿನ 12,351 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್ ಎಲ್ ಬಿ) 2ನೇ ಕಂತಿನ 2412.75 ಕೋಟಿ ರೂಪಾಯಿ ಅನುದಾನವನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಹಳ್ಳಿ, ತಾಲೂಕುಗಳಾದ್ಯಂತ ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲು ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಿಗೆ ಅಂದರೆ ಗ್ರಾಮ, ತಾಲೂಕು ಹಾಗೂ ಜಿಲ್ಲೆಗಳಿಗೆ ಈ ಅನುದಾನ ನಿಡಲಾಗುತ್ತದೆ.
ಮೊದಲ ಕಂತಿಗೆ ಬಳಕೆ ಪ್ರಮಾಣ ಪತ್ರ ನೀಡಿದ 18 ರಾಜ್ಯಗಳಿಗೆ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.
 Laxmi News 24×7
Laxmi News 24×7
				 
		 
						
					