Breaking News

ಮಧ್ಯರಾತ್ರಿಯಲ್ಲಿ ಒಂಟಿಯಾಗಿ ಆಟೋ ಹತ್ತಿದ್ದ ಕಾಲೇಜ್ ವಿದ್ಯಾರ್ಥಿ.. ನಂತರ ಆಟೋ ಡ್ರೈವರ್ ಏನು ಮಾಡಿದ್ದಾರೆ ಗೊತ್ತಾ?

Spread the love

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಅಲ್ಲಲ್ಲಿ ಒಳ್ಳೆಯ ವ್ಯಕ್ತಿಗಳು ಕೂಡ ಇರುತ್ತಾರೆ. ಹಾಗೆಯೆ ಆಟೋ ಡ್ರೈವರ್ ಗಳು ಅಂದರೇನೆ ಮೀಟರ್ ಮೇಲೆ ಜ್ಯಾಸ್ತಿ ದುಡ್ಡು ಕೇಳೋದು.. ಸರಿಯಾದ ಸಮಯಕ್ಕೆ ಸರಿಯಾದ ಜಾಗಕ್ಕೆ ಬರೋದಿಲ್ಲ ಎಂಬ ಕಂಪ್ಲೇಂಟ್ ಗಳು ಹೇಳುತ್ತಿರುತ್ತಾರೆ. ಆದರೆ ಎಲ್ಲರೂ ಇದೇ ರೀತಿ ಇರುವುದಿಲ್ಲ.. ಕೆಲವು ಆಟೋ ಡ್ರೈವರ್ ಗಳು ಕೂಡ ಒಳ್ಳೆಯ ರೀತಿಯಲ್ಲಿ ಇರುತ್ತಾರೆ. ಹಾಗೆ ಇಲ್ಲಿ ಒಬ್ಬ ಆಟೋ ಡ್ರೈವರ್ ತನ್ನ ಒಳ್ಳೆಯ ತನದಿಂದ ಎಲ್ಲರ ಮನಸ್ಸನ್ನ ಗೆದ್ದಿದ್ದಾರೆ.. ಚೆನ್ನೈ ಗೆ ಸೇರಿದ ಯತಿರಾಜ್ ಕಾಲೇಜ್ ನಲ್ಲಿ ಓದುವ ಒಬ್ಬ ಹುಡುಗಿ ರಜಾ ದಿನಗಳಲ್ಲಿ ಸ್ವಂತ ಊರಿಗೆ ಹೋಗಿದ್ದಾಳೆ.

ತನ್ನ ಕಾಲೇಜ್ ನ ಪಕ್ಕದಲ್ಲಿ ಇದ್ದ ಪೀಜಿಯಲ್ಲಿ ಈಕೆ ವಾಸವಾಗಿರುತ್ತಾಳೆ.. ಈಗಿರುವಾಗ ರಜೆಯೆಲ್ಲಾ ಮುಗಿದು ಮತ್ತೆ ಚೆನ್ನೈಗೆ ಬರುವಾಗ ತುಂಬಾ ತಡರಾತ್ರಿಯಾಗಿದೆ. ಇದರಿಂದ ಒಂದು ಆಟೋವನ್ನು ಹಿಡಿದು ಪೀಜಿಗೆ ಬಂದಿದ್ದಾಳೆ.. ಪೀಜಿಗೆ ಬಂದ ತಕ್ಷಣ ಮೊಬೈಲ್ ತೆಗೆದು ಮನೆಗೆ ಕರೆ ಮಾಡಿ ನಾನು ಚೆನ್ನೈ ಗೆ ತಲುಪಿದೆ ಅಂತ ತಿಳಿಸಲು ಹ್ಯಾಂಡ್ ಬ್ಯಾಗ್ ಅನ್ನು ಹುಡುಕಿದಾಗ ಬ್ಯಾಗ್ ಕಾಣೆಯಾಗಿದ್ದು ಗೊತ್ತಾಗಿದೆ. ಆ ಬ್ಯಾಗ್ ನಲ್ಲಿಯೇ ದುಡ್ಡು, ಮೊಬೈಲ್, ಡೆಬಿಟ್ ಕಾರ್ಡ್ ರಾತ್ರಿ ಲೇಟಾಗಿದೆ ಅನ್ನುವ ಕಾರಣಕ್ಕೆ ಆಕಿದ್ದ ಎಲ್ಲಾ ಒಡವೆಗಳನ್ನು ಕೂಡ ಆ ಬ್ಯಾಗ್ ನಲ್ಲಿಯೇ ಇಟ್ಟುಕೊಂಡಿದ್ದರು.

ಹ್ಯಾಂಡ್ ಬ್ಯಾಗ್ ಕಳೆದು ಹೋಯಿತು ಎಂದು ಅಳುತ್ತಾ ಇರುವಾಗ ಆಗಲೇ ನೋಡಿ ಆ ಹುಡುಗಿಯನ್ನ ಪೀಜಿ ಹತ್ತಿರ ಇಳಿಸಿದ ಆಟೋ ಡ್ರೈವರ್ ಮತ್ತೆ ಅಲ್ಲಿಗೆ ಬಂದು ವಾಚ್ ಮ್ಯಾನ್ ಹತ್ತಿರ ಈ ವಿಷಯವನ್ನು ತಿಳಿಸಿ. ಆ ಹುಡುಗಿಯನ್ನ ಕರೆಸಿ ತನ್ನ ಆಟೋದಲ್ಲಿ ಬಿಟ್ಟು ಹೋದ ಹ್ಯಾಂಡ್ ಬ್ಯಾಗ್ ಅನ್ನು ಆಕೆಗೆ ವಾಪಸ್ ಕೊಟ್ಟಿದ್ದಾರೆ.. ತಗೋಳಿ ಮಾ ನಿಮ್ಮ ಹ್ಯಾಂಡ್ ಬ್ಯಾಗ್ ನಾನು ಮನೆಯ ಹತ್ತಿರ ಹೋದಾಗ ಈ ಹ್ಯಾಂಡ್ ಬ್ಯಾಗ್ ಕಾಣಿಸಿದ್ದು ಇದು ನಿಮ್ಮದೇ ಅಂತ ಗೊತ್ತಾಗಿ ಬೆಳಗ್ಗೆ ತಂದುಕೊಡೋಣ ಅಂದುಕೊಂಡೆ..

ಆದರೆ ಏನಾದರೂ ಮುಖ್ಯವಾದ ವಸ್ತು ಇದರಲ್ಲಿ ಇದ್ದು ಕಳೆದು ಹೋಯಿತು ಎಂದು ದುಃಖ ಪಡುತ್ತಿದ್ದೆಯಂತ ಅರ್ದ ರಾತ್ರಿಯಾದರೂ ತಂದು ಕೊಟ್ಟೆ ಈ ಹ್ಯಾಂಡ್ ಬ್ಯಾಗ್ ನಲ್ಲಿ ಎಲ್ಲಾ ವಸ್ತುಗಳು ಸರಿಯಾಗಿ ಇದೆಯಾ ಚೆಕ್ ಮಾಡಿ ಅಂತ ಹೇಳಿದ್ದರಂತೆ.. ಇದನ್ನ ಕೇಳಿದ ಆ ಹುಡುಗಿ ಕಣ್ಣಲ್ಲಿ ನೀರು ತುಂಬಿಕೊಂಡು ಧನ್ಯವಾದ ಹೇಳಿ ಈ ವಿಚಾರವನ್ನ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಪೊಟೊ ಸಮೇತ ಹಂಚಿಕೊಂಡಿದ್ದಾರೆ..


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ