Breaking News

ಸಾಮಾಜಿಕ ಅಂತರ, ಚಿಕ್ಕ ರೂಟ್​​ನಲ್ಲಿ 72ನೇ ಗಣರಾಜ್ಯೋತ್ಸವ ಪರೇಡ್; ರಫೇಲ್​ ಪ್ರಮುಖ ಆಕರ್ಷಣೆ

Spread the love

ನವದೆಹಲಿ: ಇಂದು ಭಾರತದ 72ನೇ ಗಣರಾಜ್ಯೋತ್ಸವ. ಈ ಬಾರಿ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಗಣರಾಜ್ಯೋತ್ಸವ ಸಮಾರಂಭವನ್ನ ಸಂಕ್ಷಿಪ್ತವಾಗಿ ನಡೆಸಲಾಗ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಬೆಳಗ್ಗೆ 11.25 ಕ್ಕೆ ಮುಕ್ತಾಯಗೊಳ್ಳಲಿದೆ.

ರಾಜ್​ಪಥ್​​ನಲ್ಲಿ ನಡೆಯಲಿರುವ ಪಥಸಂಚಲನದ ಮಾರ್ಗವನ್ನ ಕಡಿತಗೊಳಿಸಲಾಗಿದೆ. ಹಾಗೇ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಇಲ್ಲ. ಕಡಿಮೆ ಸಂಖ್ಯೆಯ ಪ್ರೇಕ್ಷಕರು ಮಾತ್ರ ಪರೇಡ್​ ವೀಕ್ಷಿಸಲಿದ್ದಾರೆ. 15 ವರ್ಷದೊಳಗಿನ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬರಲು ಅವಕಾಶ ನೀಡಿಲ್ಲ. ಸಶಸ್ತ್ರ ಪಡೆ ಮತ್ತು ನೌಕಾಪಡೆಯ ತುಕಡಿಗಳಲ್ಲಿ ಕಡಿಮೆ ಸೈನಿಕರು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೊಸದಾಗಿ ಸೇನೆಗೆ ಸೇರ್ಪಡೆಗೊಂಡಿರೋ ರಫೇಲ್ ಫೈಟರ್ ಜೆಟ್ ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧದ 50ನೇ ವಾರ್ಷಿಕೋತ್ಸವ ಪರೇಡ್​ ಮುನ್ನಡೆಸಲಿರುವ ಬಾಂಗ್ಲಾದೇಶಿ ಟ್ರೈ ಸರ್ವೀಸ್​ ಕಾಂಟಿಂಜೆಂಟ್​​ ಇಂದಿನ ಪರೇಡ್​ನ ಪ್ರಮುಖ ಆಕರ್ಷಣೆಯಾಗಿವೆ. ರಾಜ್ಯ ಹಾಗೂ ಕೇಂದ್ರಾಳಿತ ಪ್ರದೇಶಗಳಿಂದ 17 ಟ್ಯಾಬ್ಲೋಗಳು, ರಕ್ಷಣಾ ಸಚಿವಾಲಯ ಹಾಗೂ ಇತರೆ 9 ಸಚಿವಾಲಯಗಳ ಟ್ಯಾಬ್ಲೋಗಳು ಸೇರಿ ಒಟ್ಟು 32 ಸ್ತಬ್ಧಚಿತ್ರಗಳು ಪರೇಡ್​​ನಲ್ಲಿ ಸಾಗಲಿವೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ