ನವದೆಹಲಿ : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೆ ಟೀಕೆ ಮಾಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವ ಬಗ್ಗೆ ಸಾರ್ವಜನಿಕರು ಹಣದುಬ್ಬರದಿಂದ ಬಳಲುತ್ತಿರುವಾಗ ಸರ್ಕಾರ ತೆರಿಗೆ ಸಂಗ್ರಹ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ಮೋದಿ ಜಿ ಅವರು ‘ಜಿಡಿಪಿ’ಯಲ್ಲಿ ಭಾರಿ ಬೆಳವಣಿಗೆಯನ್ನು ತೋರಿಸಿದ್ದಾರೆ, ಅಂದರೆ ಗ್ಯಾಸ್-ಡೀಸೆಲ್-ಪೆಟ್ರೋಲ್ ಬೆಲೆಗಳು! ಸಾರ್ವಜನಿಕರು ಹಣದುಬ್ಬರದಿಂದ ಕಷ್ಟ ಅನುಭವಿಸುತ್ತಿದ್ದಾರೆ, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಒಂದು ವಾರದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುವುದರ ಮೂಲಕ ದೇಶದಲ್ಲಿ ಶನಿವಾರ(ಜ. 23) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ದೆಹಲಿಯಲ್ಲಿ ಇವತ್ತಿನ ದರ ಗಮನಿಸುವುದಾದರೇ, ಪೆಟ್ರೋಲ್ ಪ್ರತಿ ಲೀಟರ್ ಗೆ 85.70 ರೂ ಇದ್ದರೇ, ಮುಂಬೈನಲ್ಲಿ 92.28 ರೂ ಗೆ ಏರಿಕೆಯಾಗಿದೆ. ಇನ್ನು, ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಪ್ರತಿ ಲೀಟರ್ ಗೆ 75.88 ರೂ ದರದಲ್ಲಿ ಮಾರಾಟವಾಗುತ್ತಿದ್ದರೇ, ವಾಣಿಜ್ಯ ನಗರಿ ಮುಂಬೈಯಲ್ಲಿ 82.66 ರೂ ಗೆ ಮಾರಾಟವಾಗುತ್ತಿದೆ
 Laxmi News 24×7
Laxmi News 24×7
				 
		 
						
					 
						
					 
						
					