ಶಿವಮೊಗ್ಗ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ವಿಳಂಬವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಬಳಸಿಕೊಂಡು ಮೇ ತಿಂಗಳವರವರೆಗೆ ತರಗತಿಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಶಾಲಾ-ಕಾಲೇಜುಗಳು ವಿಳಂಬವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಬಳಸಿಕೊಂಡು ಮೇ ವರೆಗೆ ಶಾಲೆಗಳನ್ನು ನಡೆಸುವ ಚಿಂತನೆ ಇದೆ. ಜೂನ್ ನಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳು ನಡೆಯಲಿವೆ. ಈಗಾಗಲೇ ಸಾಕಷ್ಟು ರಜೆ ಕಳೆದಿದ್ದು, ಉಳಿದ ನಾಲ್ಕುವರೆ ತಿಂಗಳು ಶಿಕ್ಷಕರು ಪಾಠದ ಕಡೆ ಗಮನಹರಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.