ಚೆನ್ನೈ: ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೆಲೇಯೇ ನಿರಂತರ ಅತ್ಯಾಚಾರ ನಡೆಸಿದ್ದು, ತಂದೆಯ ಕೃತ್ಯಕ್ಕೆ ಇದೀಗ ಮಗಳು ಮಗುವಿಗೆ ಜನ್ಮ ನೀಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಆರೋಪಿಯ ಪತ್ನಿ ನಿಧನಹೊಂದಿದ್ದ ಬೆನ್ನಲ್ಲೇ ಆರೋಪಿ ಎರಡನೇ ವಿವಾಹವಾಗಿದ್ದ. ಕೆಲದಿನಗಳ ಸಂಸಾರದ ಬಳಿಕ ಎರಡನೇ ಪತ್ನಿಯಿಂದಲೂ ದೂರವಾಗಿದ್ದ. ಈ ವೇಳೆ ಮೊದಲ ಹೆಂಡತಿಯ ಮಗಳು 17 ವರ್ಷದ ಬಾಲಕಿ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು.
ಎರಡನೆ ಪತ್ನಿಯೂ ದೂರವಾದ ಬಳಿಕ ಮಗಳನ್ನು ಮನೆಗೆ ಕರೆದುಕೊಂಡುಬಂದಿದ್ದ ಪಾಪಿ ತಂದೆ ಮಗಳಮೇಲೆಯೇ ನಿರಂತರ ಅತ್ಯಾಚಾರ ಮಾಡಿದ್ದಾನೆ. ಇದೀಗ ಮಗಳು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Laxmi News 24×7