ಮೈಸೂರು : ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾನೋ ಯಾರಿಗೆ ಗೊತ್ತು.? ಸಿಡಿಯಲ್ಲಿ ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ, ಅದು ಗೊತ್ತಾಗಬೇಕು ಅಲ್ಲವೇ.? ಈ ಬಗ್ಗೆ ತನಿಖೆಯಾಗಬೇಕು ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿಡಿಯಲ್ಲಿ ಏನೇನ್ ಇದೆ ಅನ್ನೋದು ಬಹಿರಂಗವಾಗಬೇಕಾದ್ರೇ, ಅದರಲ್ಲಿ ಏನ್ ಇದೆ ಎಂಬುದಾಗಿ ಗೊತ್ತಾಗಬೇಕು ಅಂದ್ರೇ ತನಿಖೆಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಶರತ್ ಬಚ್ಚೇಗೌಡ ಭೇಟಿಯ ಕುರಿತಂತೆಯೂ ಮಾತನಾಡಿದ ಅವರು, ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಮ್ಮ ಪಕ್ಷ ಹಾಗೂ ಶರತ್ ಸೇರಿ ಚುನಾವಣೆ ನಡೆಸಿದ್ದಾರೆ. ಇದೇ ಕಾರಣದಿಂದಾಗಿ ಹೊಸಕೋಟೆ ಕ್ಷೇತ್ರದಲ್ಲಿ ಶೇ.70ರಷ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದೇ ಕಾರಣದಿಂದಾಗಿ ನನಗೆ ಧನ್ಯವಾದ ಹೇಳೋಕೆ ಬಂದಿದ್ದರು ಅಂದ್ರು.
Laxmi News 24×7