Breaking News

ಕೇವಲ ʼ10 ನಿಮಿಷ‌ʼಗಳಲ್ಲೇ ನಿಮ್ಮ ʼಆಧಾರ್‌ ಅಪ್ಡೇಟ್ʼ ಮಾಡೋದ್ಹೇಗೆ ಗೊತ್ತಾ?

Spread the love

ಡಿಜಿಟಲ್‌ ಡೆಸ್ಕ್‌ : ಆಧಾರ್ ಕಾರ್ಡ್ ಇಂದು ದೇಶದ ಅತ್ಯಂತ ಪ್ರಮುಖ ಮತ್ತು ವಿಶ್ವಾಸಾರ್ಹ ದಾಖಲೆಗಳಲ್ಲಿ ಒಂದು. ಅನೇಕ ಸಾರ್ವಜನಿಕ ಸಬ್ಸಿಡಿ ಮತ್ತು ನಿರುದ್ಯೋಗ ಪ್ರಯೋಜನ ಯೋಜನೆಗಳ ಪ್ರಯೋಜನ ಪಡೆಯಲು ಸಧ್ಯ ಆಧಾರ್‌ ಅನಿವಾರ್ಯ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವುದರಿಂದ ಹಿಡಿದು, ಸರಕಾರದ ಪಡಿತರದಿಂದ ಆಹಾರ ಧಾನ್ಯ ಖರೀದಿಸುವವರೆಗೆ, ಆಧಾರ್ ನಿಮಗೆ ಬೇಕೆ ಬೇಕು. ಇಂತಹ ಆಧಾರ್‌ ಅಪ್ ಡೇಟ್ ಮಾಡೋದು ತುಂಬಾನೇ ಅಗತ್ಯ.

ಹೌದು, ನಿಮ್ಮ ಆಧಾರ್ ಕಾರ್ಡ್ʼನಲ್ಲಿ ಸಾಮಾನ್ಯವಾಗಿರುವ ಬಹುತೇಕ ಬದಲಾವಣೆಗಳನ್ನ ಅಂದ್ರೆ, ನಿಮ್ಮ ಫೋನ್ ನಂಬರ್, ವಿಳಾಸ ಅಥವಾ ಇಮೇಲ್ ಐಡಿಯನ್ನ ಮನೆಯಲ್ಲೇ ಕುಳಿತು ಬದಲಾಯಿಸ್ಬೋದು. ಇದಕ್ಕಾಗಿ ನೀವು ಆಧಾರ್ ಕೇಂದ್ರ ಅಥವಾ ಅಪ್ ಡೇಟ್ ಕೇಂದ್ರಕ್ಕೆ ಭೇಟಿ ನೀಡಬೇಕಿಲ್ಲ. ಹಾಗದ್ರೆ, ಕೆಲವೇ ನಿಮಿಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಸಾಮಾನ್ಯ ಬದಲಾವಣೆಗಳನ್ನ ಮಾಡೋದ್ಹೇಗೆ ಅನ್ನೋದನ್ನ ನೋಡೋಣಾ ಬನ್ನಿ.

ನಿಮ್ಮ ಆಧಾರ್ ಕಾರ್ಡ್ʼನ್ನ ಆನ್ಲೈನ್ʼನಲ್ಲಿ ಅಪ್ ಡೇಟ್ ಮಾಡಲು ಈ ಹಂತಗಳನ್ನ ಅನುಸರಿಸಿ..!

ಹಂತ 1: 2009ರಲ್ಲಿ ಸ್ಥಾಪಿತವಾದ ಶಾಸನ ಬದ್ಧ ಪ್ರಾಧಿಕಾರವಾದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ ‘ಆಧಾರ್ ಅಪ್ ಡೇಟ್ ಗೆ ಮುಂದುವರೆಯಿರಿ’ ಎಂಬ ಆಯ್ಕೆಯನ್ನು ನೀವು ಕಾಣುತ್ತೀರಿ. ಅದರ ಮೇಲೆ .

ಹಂತ 3: ವೆಬ್ ಸೈಟ್ ಕೇಳಿದ ವಿವರಗಳನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾ ದಲ್ಲಿ ಟೈಪ್ ಮಾಡಿ

ಹಂತ 4: ನಿಮ್ಮ ಮೊಬೈಲ್ ಫೋನ್ ನಲ್ಲಿ ನೀವು ಸ್ವೀಕರಿಸುವ OTP ಯನ್ನು ನಮೂದಿಸಿ

ಹಂತ 5: ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತು ಅಪ್ ಡೇಟ್ ಮೇಲೆ .

ಯುಐಡಿಎಐ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾತ್ರ ಒಟಿಪಿ ಕಳುಹಿಸುತ್ತದೆ. ಇದಲ್ಲದೆ, ನೀವು ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಲಿಂಗ, ಹೆಸರು, ಜನ್ಮ ದಿನಾಂಕ ಮತ್ತು ಭಾಷೆಯನ್ನು ಆನ್ ಲೈನ್ ನಲ್ಲಿ ಅಪ್ ಡೇಟ್ ಮಾಡಬಹುದು. ನಿಮ್ಮ ಬಯೋಮೆಟ್ರಿಕ್ ಅಪ್ ಡೇಟ್ ಮಾಡಲು ಅಥವಾ ನಿಮ್ಮ ಪೋಷಕರ ವಿವರಗಳನ್ನು ಬದಲಾಯಿಸಲು, ನೀವು ಆಧಾರ್ ಸೇವಾ ಕೇಂದ್ರ ಅಥವಾ ಅಪ್ ಡೇಟ್ ಕೇಂದ್ರಕ್ಕೆ ಭೇಟಿ ನೀಡಿ.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: ಜಯ ಜೋಶಿ

Spread the love ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ