Breaking News

ಸುದೀಪ್‌ಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ

Spread the love

ಭಾರತೀಯ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ವಿಶೇಷವಾಗಿ ಅವರ ಅಭಿಮಾನಿಗಳು ಕೈಗೊಂಡ ಮಹತ್ವದ ಕೆಲಸಕ್ಕಾಗಿ ಲೋಕಸಭೆ ಸದಸ್ಯೆ ಮೇನಕಾ ಗಾಂಧಿ ಅವರು ದೂರವಾಣಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ಮೂಕಪ್ರಾಣಿ ವಿಚಾರದಲ್ಲಿ ತಾವು ಮತ್ತು ತಮ್ಮ ಅಭಿಮಾನಿಗಳು ಮಾಡಿದ ಕೆಲಸ ನಿಜಕ್ಕೂ ಸ್ವಾಗತಾರ್ಹ, ನಿಮ್ಮಿಂದ ಇಂತಹ ಕೆಲಸಗಳು ಮತ್ತಷ್ಟು ಆಗಲಿ ಎಂದು ಶ್ಲಾಘಿಸಿದ್ದಾರೆ.ಅಂದ್ಹಾಗೆ, ಕಿಚ್ಚ ಸುದೀಪ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಡೆಯಿಂದ 25 ಒಳ್ಳೆಯ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಸತತವಾಗಿ 25 ದಿನಗಳ ಕಾಲ ಮಾನವೀಯತೆ ಸಂದೇಶ ಸಾರುವ ಸಲುವಾಗಿ 25 ಕೆಲಸಗಳನ್ನು ಮಾಡುವ ಕಾರ್ಯ ಪ್ರಾರಂಭಿಸಲಾಗಿದೆ.

ಅದರಲ್ಲೂ ಮೂಕಪ್ರಾಣಿಗಳಿಗೆ (ವಿಶೇಷವಾಗಿ ಬೀದಿಶ್ವಾನಗಳಿಗೆ) ಆಶ್ರಯ ವ್ಯವಸ್ಥೆ ಮಾಡಿರುವುದಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅಂದ್ರೆ ಶ್ವಾನಗಳಿಗಾಗಿ ಶೆಟ್ಟರ್ ತೆರೆಯಲಾಗಿದೆ.

ಇದೇ ವಿಚಾರವಾಗಿ ಸುದೀಪ್ ಅವರಿಗೆ ದೂರವಾಣಿ ಕರೆ ಮಾಡಿದ್ದ ಮೇನಕಾ ಗಾಂಧಿ (Founder of people for Animals) ”ಭಾರತದಾದ್ಯಂತ ಇಂತಹ 100 ಶೆಟ್ಟರ್‌ಗಳ ಅವಶ್ಯಕತೆಯಿದ್ದು, ನೀವು (ಸುದೀಪ್) ಮೊದಲನೇಯ ಶೆಟ್ಟರ್‌ಗೆ ಕಾರಣರಾಗಿದ್ದಿರಾ. ಹಾಗೂ ಮೊದಲನೇ ಅಡಿಪಾಯದ ಕಲ್ಲು ನೆಟ್ಟಿದ್ದಿರಾ…ನಿಮ್ಮ ಸೇವೆ ಹೀಗೆ ಮುಂದುವರೆಯುತ್ತಾ ಇರಲಿ” ಎಂದಿದ್ದಾರೆ.

25 ಮಹತ್ವದ ಕೆಲಸಗಳಲ್ಲಿ ಇದೊಂದೆ ಅಲ್ಲ, ದೆಹಯಲ್ಲಿ ಮುಷ್ಕರ ನಿರತರಾಗಿರುವ ಅನ್ನದಾತರಿಗೆ 500 ಬ್ಲ್ಯಾಂಕೆಟ್ ಗಳನ್ನು ಕಳುಹಿಸಿಕೊಡಲಾಗಿದೆ. ಬದುಕುವ ಭರವಸೆ ಕಳೆದುಕೊಂಡಿದ್ದ ಸುಶ್ಮಾಂತ್ ಎಂಬ ವ್ಯಕ್ತಿಯ ಕುಟುಂಬಕ್ಕೆ ನೆರವು ನೀಡಲಾಗಿದೆ. ವಿಶೇಷಚೇತನರಿಗಾಗಿ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.

ಇತ್ತೀಚಿಗಷ್ಟೆ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎಟಿ ರಘು ಅವರಿಗೆ ಫೋನ್ ಮಾಡಿದ್ದ ನಟ ಸುದೀಪ್ ಧೈರ್ಯ ತುಂಬಿದ್ದರು. ”ನಿಮ್ಮ ಜೊತೆ ನಾವು ಇದ್ದೇವೆ, ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ, ಧೈರ್ಯವಾಗಿರಿ” ಎಂದು ಭರವಸೆ ನೀಡಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ