ಬೆಂಗಳೂರು: ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲವನ್ನು ಸೂರ್ಯಸಿಟಿ ಪೊಲೀಸರು ಬೇಧಿಸಿದ್ದಾರೆ.
ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಅಲಿಯಾಸ್ ನಂಜಪ್ಪ ಹಾಗೂ ನರೇಶ್ ಅಲಿಯಾಸ್ ಜೋಗರಾಂನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮಷೀನ್ ಹಾಗೂ 6 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 100, 200 ಹಾಗೂ 500 ಮುಖಬೆಲೆಯ ನಕಲಿ ನೋಟುಗಳು ಇವೆ.

ವಂಚಕರು ಕಲರ್ ಪ್ರಿಂಟಿಂಗ್ ಮಷೀನ್ ಮೂಲಕ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದರು. ಸಂತೆ ಸೇರಿದಂತೆ ಗದ್ದಲ ಇರುತ್ತಿದ್ದ ಅಂಗಡಿಗಳಿಗೆ ನೋಟನ್ನು ನೀಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೂರ್ಯನಗರ ಠಾಣೆಯ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
Laxmi News 24×7