Breaking News

ಭಾರತದಲ್ಲಿ ಬ್ಯಾನ್​ಗೆ ಒಳಗಾದರೂ ಚೀನಾದ ಆಯಪ್ ಟಿಕ್​ಟಾಕ್ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಆಯಪ್ ಎನ್ನಿಸಿಕೊಂಡಿದೆ. ಆಯಪ್ ​ಟೋಪಿಯಾ

Spread the love

ನವದೆಹಲಿ: ಭಾರತದಲ್ಲಿ ಬ್ಯಾನ್​ಗೆ ಒಳಗಾದರೂ ಚೀನಾದ ಆಯಪ್ ಟಿಕ್​ಟಾಕ್ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಆಯಪ್ ಎನ್ನಿಸಿಕೊಂಡಿದೆ.

ಆಯಪ್ ​ಟೋಪಿಯಾ ಬಿಡುಗಡೆ ಮಾಡಿರುವ ಅನಾಲಿಟಿಕ್ಸ್​ನಲ್ಲಿ ಟಿಕ್​ಟಾಕ್​ 540 ಮಿಲಿಯನ್ ಡಾಲರ್(₹39,62,43,36,000) ಆದಾಯ ಗಳಿಸುವ ಮೂಲಕ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಇನ್ನು ಟಿಂಡರ್ ಆಯಪ್ 513 ಮಿಲಿಯನ್ ಡಾಲರ್(₹37,64,31,19,200) ಆದಾಯ ಗಳಿಸುವ ಮೂಲಕ ನಂಬರ್ 2 ಸ್ಥಾನ ಪಡೆದಿದೆ.

ಆಯಪ್ ​ಟೋಪಿಯಾದ ಡೇಟಾ ಪ್ರಕಾರ.. ಯೂಟ್ಯೂವ್ ಮೂರನೇ ಸ್ಥಾನದಲ್ಲಿದ್ದು 478 ಮಿಲಿಯನ್ ಡಾಲರ್(₹35,07,48,75,200) ಆದಾಯ ಗಳಿಸಿದೆ. ಡಿಸ್ನಿ ಪ್ಲಸ್ ನಾಲ್ಕನೇ ಸ್ಥಾನದಲ್ಲಿದ್ದು 314 ಮಿಲಿಯನ್ ಡಾಲರ್(₹23,04,08,17,600) ಆದಾಯ ಗಳಿಸಿದೆ. ನಂತರ ಸ್ಥಾನದಲ್ಲಿ ಟೆನ್​ಸೆಂಟ್ ವಿಡಿಯೋ ಆಯಪ್ ಇದ್ದು 2020ರಲ್ಲಿ 300 ಮಿಲಿಯನ್ ಡಾಲರ್(₹22,01,35,20,000) ಆದಾಯ ಗಳಿಸಿದೆ. ನೆಟ್​ಫ್ಲಿಕ್ಸ್ 10ನೇ ಸ್ಥಾನದಲ್ಲಿದ್ದು 209 ಮಿಲಿಯನ್ ಡಾಲರ್(₹15,33,60,85,600) ಆದಾಯ ಗಳಿಸಿದೆ.


Spread the love

About Laxminews 24x7

Check Also

ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ”

Spread the love“ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ