Breaking News

ಜನವರಿ 21 ರಿಂದ ಹುಬ್ಬಳ್ಳಿಯಿಂದ ಗೋವಾ ಮತ್ತು ಕೊಚ್ಚಿಗೆ ನೇರ ವಿಮಾನಯಾನ ಆರಂಭ

Spread the love

[ ಹುಬ್ಬಳ್ಳಿ: ಜನವರಿ 21 ರಿಂದ ಹುಬ್ಬಳ್ಳಿಯಿಂದ ಗೋವಾ ಮತ್ತು ಕೊಚ್ಚಿಗೆ ನೇರ ವಿಮಾನಯಾನ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಇಂಡಿಗೋ ಸಂಸ್ಥೆ ವಿಮಾನಯಾನದ ಮೂಲಕ ಹುಬ್ಬಳ್ಳಿಯಿಂದ ಮತ್ತೆರಡು ನಗರಗಳ ಜೊತೆ ನೇರ ಸಂಪರ್ಕ ಬೆಳೆಸಲಿದೆ. ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನಗರಗಳಿಗೆ ನೇರ ವಿಮಾನ ಸೇವೆಯನ್ನು ಜ. 21 ರಿಂದ ಪುನರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಮಯ :
* ಮಧ್ಯಾಹ್ನ 1.00ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 3.10 ಕ್ಕೆ ಕೊಚ್ಚಿ ತಲುಪುಲಿದೆ
* ಮಧ್ಯಾಹ್ನ 3.45ಕ್ಕೆ ಕೊಚ್ಚಿಯಿಂದ ಹೊರಟು ಸಂಜೆ 5.30 ಕ್ಕೆ ಹುಬ್ಬಳ್ಳಿಗೆತಲುಪಲಿದೆ.
* ಸಂಜೆ 6.00ಕ್ಕೆ ಹುಬ್ಬಳ್ಳಿಯಿಂದ ಹೊರಟು ಸಂಜೆ 7.00 ಕ್ಕೆ ಗೋವಾ ತಲುಪಲಿದೆ.
* ಸಂಜೆ 7.30ಕ್ಕೆ ಗೋವಾಯಿಂದ ಹೊರಟು ರಾತ್ರಿ 8.30ಕ್ಕೆ ಹುಬ್ಬಳ್ಳಿ ತಲುಪಲಿದೆ.


Spread the love

About Laxminews 24x7

Check Also

ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ”

Spread the love“ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ